ಮೂಡಿಗೆರೆ: ನಾವು ಮಾತ್ರ ಅರೋಗ್ಯ ವಾದ ಅನುಕೂಲಕರವಾದ ಜೀವನ ನಡೆಸಿದರೆ ಸಾಕು ಎನ್ನುವ ಈ ಕಾಲದಲ್ಲಿ ತಮ್ಮ ನೆರೆ ಹೊರೆಯವರು ಸುಖಕರವಾದ ಜೀವನ ನಡೆಸಬೇಕೆಂದು ಅಸೆ ಪಡುವ ವ್ಯಕ್ತಿಗಳು ಕಡಿಮೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಸಾಲಿನ ಸಾರವನ್ನು ಸವಿದು ಎಲ್ಲರಿಗೂ ಆದರ್ಶವಾಗಿದ್ದಾರೆ ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ಶ್ರೀಮತಿ ಜಿ.ಆರ್. ವನಶ್ರೀಯವರು.ಇವರು ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬೇರೆ ರೈತ ಮಹಿಳೆಯರಿಗೆ ಸ್ಫೂರ್ತಿ ದಾಯಕವಾಗಿ ಕೃಷಿಯನ್ನು ಮಾಡುತಿದ್ದಾರೆ ಇವರು ಚಿಪ್ಪು ಅಣಬೆಯನ್ನು ಬೆಳೆದು ಹೆಚ್ಚು ಲಾಭವನ್ನು ಗಳಿಸಿದ್ದಾರೆ ಮಹಿಳೆಯರು ಹೆಚ್ಚಾಗಿ ಅಡುಗೆ ಮನೆ ಹಾಗೂ ಮಕ್ಕಳ ಪಾಲನೆಗೆ ಸೀಮಿತವಾಗಿರುತ್ತಾರೆ ಎಂಬ ಕಲ್ಪನೆಯನ್ನು ಸುಳ್ಳಾಗಿಸಿದ್ದಾರೆ ತಮ್ಮ ಕುಟುಂಬದ ಎಲ್ಲಾ ಆಗು ಹೋಗುಗಳನ್ನು ನಿಭಾಯಿಸಿಕೊಂಡು ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಂಡು ಯಾವ ಕೆಲಸಕ್ಕೂ ಸೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇವರು ಹಲವು ರೈತ ಮಹಿಳೆಯರಿಗೆ ಕೃಷಿ ಯಂತ್ರೋಪಕರಣಗಳನ್ನು ಬಳಸುವುದರ ಬಗ್ಗೆ ತರಬೇತಿಯನ್ನು ನೀಡಿರುತ್ತಾರೆ ಇವರು ರಾಜ್ಯ ರೈತ ಸಂಘದ ಉಪಾಧ್ಯಕ್ಷೆಯಾಗಿ ನೇಪಾಳದಲ್ಲಿ ನಡೆದ ಸೌತ್ ಏಷ್ಯಾ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಅಲ್ಲಿನ ಕೃಷಿ ಪದ್ದತಿಯನ್ನು ಇಲ್ಲಿ ಅಳವಡಿಸಿಕೊಂಡಿದ್ದಾರೆ ತಮ್ಮ ತೋಟದಲ್ಲಿ ವಿವಿಧ ರೀತಿಯ ಹಣ್ಣಿನ ಬೆಳೆಗಳು ಕಾಫಿ. ಏಲಕ್ಕಿ. ಮೆಣಸು.ಶುಂಠಿ ನರ್ಸರಿ ತರಕಾರಿ ಹಾಗೂ ಅಣಬೆ ಕೃಷಿಎಲ್ಲಾ ಬಗೆಯ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದು ಅ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡಿರುತ್ತಾರೆ ತಮ್ಮ ಕೃಷಿ ಜೀವನದಲ್ಲಿ ಏರಿಳಿತಗಳನ್ನು ಕಂಡಿರುವ ಇವರು ಉತ್ತಮ ಕೃಷಿ ಮಹಿಳೆಯಾಗಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಪಡೆದುಕೊಂಡಿದ್ದಾರೆ ಸಮಗ್ರ ಕೃಷಿ ಪದ್ಧತಿಯಲ್ಲಿನ ಇವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶ್ರೀಮತಿ ಜಿ ಆರ್ ವನಶ್ರೀ ಅವರಿಗೆ ಸನ್ಮಾನ ಪತ್ರ ಹಾಗೂ ನೆನಪಿನ ಕಾಣಿಕೆಯೊಂದಿಗೆ ಜಿಲ್ಲಾ ಮಟ್ಟದ ಶ್ರೇಷ್ಠ “ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ 2021″ನೀಡಿ ಗೌರವಿಸಿದೆ.
