ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾನಳ್ಳಿ ಎಂಬಲ್ಲಿ ನಿವೇಶನ ರಹಿತ ಸೋಗಿನಲ್ಲಿ ಕೆಲ ವ್ಯಕ್ತಿಗಳು ಭೂಕಬಳಿಕೆ ಹುನ್ನಾರ ನಡೆಸಿ ರಾತ್ರೋ ರಾತ್ರಿ ಶೆಡ್ ನಿರ್ಮಾಣ ಮಾಡಿದ ಘಟನೆ ನಡೆದಿತ್ತು.
ಫಲ್ಗುಣಿ ಗ್ರಾಮದ ಸರ್ವೇ ನಂಬರ್ 249 ರ ಸರಕಾರಿ ಜಾಗದಲ್ಲಿ ಶೆಡ್ ಹಾಕಲಾಗಿತ್ತು. ಈ ಜಾಮೀನಿನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆಟದ ಮೈದಾನ , ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಾದಿಯರ ವಸತಿಗೃಹ ನಿರ್ಮಾಣ ಮಾಡುವ ಉದ್ದೇಶದಿಂದಾ ಜಾಗ ಮೀಸಲೀರಿಸಲಾಗಿದೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಧಾವಿಸಿದ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಹಾಕಿದ್ದ ಎಲ್ಲಾ ಶೆಡ್ ಗಳನ್ನು ತೆರವುಗೊಳಿಸಲಾಯಿತು.
ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಉಮೇಶ್, ಸೋಮಶೇಖರ್, ಆನಂದ್, ನಮಿತ, ವಿನುತ,ನಿತ್ಯ, ಅನಿಷ, ರಮ್ಯಾ, ಅನುಷಾ, ಮತ್ತು ಕಂದಾಯ ಸಹಾಯಕರು ಇದ್ದರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾನಳ್ಳಿ ಗ್ರಾಮದಲ್ಲಿ ನಡೆದ ಘಟನೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ