ಬಣಕಲ್ :ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಅದ್ಧೂರಿಯಾಗಿ ನಡೆದ ವಾರ್ಷಿಕ ಜಾತ್ರೋತ್ಸವವು ಭಕ್ತಿ, ಸಂಭ್ರಮ ಹಾಗೂ ಜನಸಾಗರದ ನಡುವೆ ಸಂಭ್ರಮ ಸಡಗರದಿಂದ ಬುಧವಾರ ಮುಕ್ತಾಯವಾಯಿತು.
ವಿವಿಧ ಧಾರ್ಮಿಕ ವಿಧಿವಿಧಾನಗಳು, ರಥೋತ್ಸವ ಹಾಗೇ ನಿರೋಕೋಳಿ, ಹಬ್ಬದ ವಾತಾವರಣವು ಸ್ಥಳೀಯರು ಮತ್ತು ಭಕ್ತರಲ್ಲಿ ಮರೆಯಲಾಗದ ನೆನಪುಗಳನ್ನು ಮೂಡಿಸಿತು.
ಬಣಕಲ್ನ ಆರಾಧ್ಯ ದೈವದ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಲಂಕಾರ ಮತ್ತು ಮಹೋತ್ಸವಗಳು ನಡೆದವು.
ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಜಾತ್ರೆಯಲ್ಲಿ ವಿವಿಧ ರೀತಿಯ ಅಂಗಡಿ ಮಳಿಗೆಗಳು, ಜಾತ್ರೆಗೆ ಮೆರಗು ನೀಡಿತು.
ಸಂಪ್ರದಾಯಬದ್ಧವಾಗಿ ನಡೆದ ಬಣಕಲ್ ವಿಲೇಜ್ ಜಾತ್ರೆಯು ಗ್ರಾಮದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಿತು.
ಜಾತ್ರೆ ವಿಜೃಂಭಣೆಯಿಂದ ನಡೆಯಲು ಕಾರಣಕರ್ತರಾದ ಗ್ರಾಮಸ್ಥರಿಗೂ ಸಮಿತಿ ಸದಸ್ಯರಿಗೆ ಅಧ್ಯಕ್ಷ ಬಿ ಎಸ್ ದಿವ್ಯ ಪ್ರಸಾದ್. ಕಾರ್ಯದರ್ಶಿ. ಬಿ.ಸಿ. ಪ್ರವೀಣ್. ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ