ಚಿಕ್ಕಮಗಳೂರು :ಬಣಕಲ್ ಸಮೀಪದ ಬಿ ಹೊಸಳ್ಳಿಯ ಸಾಕ್ಷಾತ್ ಗೌಡ ಜೂನ್ 14ರಿಂದ18ರವರೆಗೆ ನಡೆಯಲಿರುವ ನೆಟ್ ಬಾಲ್ ಎಷ್ಯನ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ ಇವರು ಬಿ ಹೊಸಳ್ಳಿಯ ಶಂಕರ್ ಹಾಗೂ ಸೀಮಾ ದಂಪತಿಯ ಪುತ್ರರಾಗಿದ್ದಾರೆ.
ಇವರು ಒಟ್ಟು 18 ಬಾರಿ ನ್ಯಾಷನಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ತಂಡಕ್ಕೆ ಆಡಿದ್ದಾರೆ, ಐದು ಬಾರಿ ಆಲ್ ಇಂಡಿಯಾ ಆಡಿದ್ದಾರೆ,ಒಂದು ಆಲ್ ಇಂಡಿಯಾ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ, ಒಂದು ಆಲ್ ಇಂಡಿಯಾ ಚಾಂಪಿಯನ್ಸ್ ನಲ್ಲಿ ಬೆಳ್ಳಿ ಪದಕ, ಮೂರು ಬಾರಿ ಕರ್ನಾಟಕ ತಂಡಕ್ಕೆ ಕಂಚಿನ ಪದಕ ತಂದುಕೊಟ್ಟಸಾಧನೆ ಮಾಡಿದ್ದಾರೆ,ಹಾಗೂ ಏಪ್ರಿಲ್ ನಲ್ಲಿ ನಡೆದ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡದ ನಾಯಕನಾಗಿ ಕರ್ನಾಟಕ ತಂಡಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ.ಈಗ ಜೂನ್ 14 ರಿಂದ 18 ರವರೆಗೆ ನಡೆಯಲಿರುವ ನೆಟ್ ಬಾಲ್ ಏಷ್ಯನ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಆಯ್ಕೆ ಆಗುವ ಮೂಲಕ ಜೆಲ್ಲೆಯ ಜನರು ಹೆಮ್ಮೆ ಪಡುವಂತಾಗಿದೆ ಭಾರತ ತಂಡದಲ್ಲಿ ಸಾಕ್ಷಾತ್ ಪ್ರಜ್ವಲಿಸುವ ಮೂಲಕ ದೇಶಕ್ಕೆ ಜಿಲ್ಲೆಗೆ ಕೀರ್ತಿ ತರಲಿ ಎಂದು ಸಾರ್ವಜನಿಕರು ಶುಭ ಹಾರೈಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ