ಬಣಕಲ್ :ಹಾಡು ಹಗಲಲ್ಲೇ ಕಾಡುಕೋಣ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟು ಮಾಡಿದ ಪ್ರಸಂಗ ಮೂಡಿಗೆರೆ ತಾಲೂಕು ಮತ್ತಿಕಟ್ಟೆಯಲ್ಲಿ ನಡೆದಿದೆ.
ಸೋಮವಾರ ದಿನದಂದು ಸಂಜೆಯ ಸಮಯದಲ್ಲಿ ರಸ್ತೆಯಲ್ಲೇ ಹಿಂಡು ಕಾಡು ಕೋಣಗಳು ಎಸ್ಟೇಟ್ ನಿಂದ ನೆರವಾಗಿ ರಸ್ತೆಗೆ ಬಂದು ವಾಹನ ಚಾಲಕರಿಗೆ ಆತಂಕ ಉಂಟು ಮಾಡಿದೆ. ಪ್ರತಿ ನಿತ್ಯ ಇದೆ ರೀತಿಯಲ್ಲಿ ಕಾಡು ಕೋಣಗಳು ರಸ್ತೆಗೆ ಬರುವುದು ಹೋಗುವುದು ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಆಟೋ ಚಾಲಕ ಕಿಶೋರ್ ಶಾಲಾ ಮಕ್ಕಳು ಕೂಲಿ ಕಾರ್ಮಿಕರು ಪ್ರತಿ ನಿತ್ಯ ಅದೇ ದಾರಿಯಲ್ಲಿಶಾಲೆಗೆ ಹಾಗೂ ಕೂಲಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಾರೆ.ಕೆಲವು ತಿಂಗಳ ಹಿಂದೆ ಬೈಕ್ ಸವಾರನಿಗೆ ಗುದ್ದಿ ಗಾಯಗೊಳಿಸಿತ್ತು.ಇದರಿಂದ ಅಪಾಯ ಖಂಡಿತ ಜನರನ್ನು ಕಂಡಾಗ ಗಾಬರಿಯಿಂದ ಮೇಲೆರಗುತ್ತದೆ. ಹಲವು ಭಾರಿ ಅಪಾಯ ಎದುರಾಗಿದೆ.ಅದರಿಂದ ದಯಮಾಡಿ ಅರಣ್ಯ ಸಿಬ್ಬಂದಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ