ಪೆರೇಡ್ ನಲ್ಲಿ ನಾರಾಯಣಗುರು ಸ್ತಬ್ದಚಿತ್ರ ತಿರಸ್ಕಾರ ಮತ್ತಿಕಟ್ಟೆ ಬಿಲ್ಲವ ಘಟಕದ ಅಧ್ಯಕ್ಷ ಸತೀಶ್ ಪೂಜಾರಿ ಖಂಡನೆ


ಬಣಕಲ್ :ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಳ್ಳಲು ಕೇರಳ ಸರ್ಕಾರವು ಶಿಫಾರಸ್ಸು ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಬಿಲ್ಲವ ಸಮಾಜದ ಸೇವಾ ಸಂಘದ ಮತ್ತಿಕಟ್ಟೆ ಘಟಕದ ಅಧ್ಯಕ್ಷ ಸತೀಶ್ ಹೇಳಿದ್ದಾರೆ ಬ್ರಹ್ಮಶ್ರೀ ನಾರಾಯಣಗುರುಗಳು ಒಂದೇ ಜಾತಿ ಒಂದೇ ಕುಲ ಒಬ್ಬನೇ ದೇವರು ಎಂದು ಸಾರಿದ ಮಹಾನ್ ದಾರ್ಶನಿಕ. ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂದು ಹೇಳಿದ ಮಹಾನ್ ವ್ಯಕ್ತಿಯಾಗಿದ್ದು ಅವರ ಸಂದೇಶ ಸರ್ವಕಾಲಿಕವಾಗಿದೆ.ನಾರಾಯಣಗುರುಗಳು ಕೇರಳದಲ್ಲಿ ಹಿಂದುಳಿದವರಿಗಾಗಿ ವಿಶೇಷ ಕ್ರಾಂತಿ ಮಾಡಿ ಅವರಿಗೆ ಸಮಾನತೆ ನೀಡಿದ ಮಹಾನ್ ಸಂತ ಎಂದು ತಿಳಿಸಿದರು ಇಂತಹ ಮಹಾನ್ ವ್ಯಕ್ತಿಯ ಸ್ತಬ್ದಚಿತ್ರವನ್ನು ಕೇಂದ್ರ ತಿರಸ್ಕಾರ ಮಾಡಿರುವುದು ಇಂದುಲೇಖ ಎಲ್ಲಾ ವರ್ಗದವರಿಗೆ ಅತ್ಯಂತ ಬೇಸರವನ್ನುಂಟು ಮಾಡಿದೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇಂತಹ ಪ್ರಮಾದ ಎಸಗದೆ ನಾರಾಯಣಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಅವರ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರುವಂತೆ ಮಾಡಬೇಕು ಎಂದು ಅಗ್ರಹಿಸಿದರು ಸ್ತಬ್ದ ಚಿತ್ರವನ್ನು ಪೆರೇಡ್ ನಲ್ಲಿ ಪ್ರದರ್ಶಿಸಲು ಅವಕಾಶ ಇದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಬೇಕು ಇನ್ನು ಮುಂದೆ ಇಂತಹ ದಾರ್ಶನಿಕ ಸಂತರಿಗೆ ಅಪಮಾನವಾಗದಂತೆ ನೋಡಿಕೊಳ್ಳಬೇಕು ನಾರಾಯಣ ಗುರು ಕೇವಲ ಒಂದು ರಾಜ್ಯದ ಸಂಸ್ಕೃತಿಯಲ್ಲ ಅವರು ಶೋಷಿತರ ಪರ ನಿಂತ ಮಹಾನ್ ಗುರುಗಳು ದೇಶದ ಅಸ್ತಿ ಎಂದು ಹೇಳಿದರು