ಜೆಸಿಐ ವಿಸ್ಮಯ ಬಣಕಲ್ ಇವರ ವತಿಯಿಂದ ಭಾರತೀಯ ಸೇನಾ ಯೋದನಿಗೆ ಸನ್ಮಾನ

ಬಣಕಲ್: ಭಾರತೀಯ ಸೇನಾ ದಿನದ ಅಂಗವಾಗಿ ಇಂದು ಬಣಕಲ್ ನಲ್ಲಿ ಜೆಸಿಐ ವಿಸ್ಮಯ ಬಣಕಲ್ ಇವರ ವತಿಯಿಂದ ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮನು ಕುಮಾರ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮೂಡಿಗೆರೆ ತಾಲ್ಲೂಕು ಬಣಕಲ್ ನಿವಾಸಿ ಶ್ರೀಯುತ ಎಂ ಪಿ ಶಿವಪ್ಪಗೌಡ ಮತ್ತು ಎಂ ಎನ್ ನಾಗವೇಣಿಯ ವರ ಪುತ್ರರಾದ ಇವರು 2010 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಕಳೆದ 12 ವರ್ಷಗಳಿಂದ ನಮ್ಮ ಹೆಮ್ಮೆಯ ಸೇನೆಯಲ್ಲಿ ಸೈನಿಕನಾಗಿ ಪಂಜಾಬ್ ಹಲ್ವಾರದಲ್ಲಿ 9 ವಿಂಗ್ ನಲ್ಲಿ, ದೆಹಲಿಯ ಸುಬ್ರತೋ ಪಾರ್ಕ್ ನಲ್ಲಿARFO ಹೆಡ್ ಕ್ವಾರ್ಟರ್ಸ್ ನಲ್ಲಿ ಹಾಗೂ ಪ್ರಸ್ತುತ ಅಸ್ಸಾಂ ನ ತೇಜ್ಪುರದಲ್ಲಿ 11 ವಿಂಗ್ ನಲ್ಲಿ ಅಡ್ಮಿನಿಸ್ಟ್ರೇಟಿವ್ ಅಡ್ವೈಸರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರೇ ಕೇವಲ 32 ವರ್ಷದ ಹೆಮ್ಮೆಯ ಯುವ ಸೈನಿಕ ಶ್ರೀಯುತ ಎಂಎಸ್ ಮನುಕುಮಾರ್ ಇವರಿಗೆ ಭಾರತೀಯ ಸೇನಾ ದಿನಾಚರಣೆ ಯ ಈ ದಿನದಂದು ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯ ವತಿಯಿಂದ ಸನ್ಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶರತ್ ಫಲ್ಗುಣಿ, ಉಪಾಧ್ಯಕ್ಷರಾದ ಜೇಸಿ ಎ ಆರ್ ಅಭಿಲಾಶ್, ಜೇಸಿ ಅಶ್ವಿನ್ ಉಪಸ್ಥಿತರಿದ್ದರು.