*ಜಾನುವಾರುಗಳು ರಸ್ತೆಯಲ್ಲಿ ಕಂಡುಬಂದರೆ ಸದರಿ ಜಾನುವಾರು ಮಾಲೀಕರಿಗೆ ದಂಡ:ಬಣಕಲ್ ಗ್ರಾಮ ಪಂಚಾಯಿತಿ*

ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ , ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ವಾಹನ ಅಪಘಾತದಿಂದಾಗಿ ಬೀಡಾಡಿ ದನಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿರುವುದು ಪಂಚಾಯತಿಯ ಗಮನಕ್ಕೆ ಬಂದಿದ್ದು ಈ ಬಗ್ಗೆ ದಿನಾಂಕ 19/8/2025 ರ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳು ಹಾಗೂ ಗ್ರಾಮಸ್ಥರು ತೆಗೆದುಕೊಂಡ ನಿರ್ಣಯದಂತೆ ಪಂಚಾಯಿತಿ ವ್ಯಾಪ್ತಿಯ ಜಾನುವಾರು ಮಾಲೀಕರು ತಮಗೆ ಸಂಬಂಧಿಸಿದ ಜಾಗದಲ್ಲಿ ತಮ್ಮ ಜಾನುವಾರುಗಳನ್ನು ಕಟ್ಟಿ ಹಾಕಿಕೊಂಡು ಸಾಕಿಕೊಳ್ಳತಕ್ಕದ್ದು.ದಿನಾಂಕ 30/8/2025ಶನಿವಾರ ನಂತರ ಯಾವುದಾದರು ಜಾನುವಾರುಗಳು ರಸ್ತೆಯಲ್ಲಿ ಕಂಡು ಬಂದರೆ ಸದರಿ ಜಾನುವಾರು ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ರಸ್ತೆಯಲ್ಲಿ ಕಂಡುಬರುವ ಜಾನುವಾರುಗಳನ್ನು ಗೋ ಶಾಲೆಗಳಿಗೆ ಸ್ಥಳಾಂತರ ಮಾಡಲಾಗುವುದು. ಆದ್ದರಿಂದ ಜಾನುವಾರು ಮಾಲೀಕರು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಾನುವಾರುಗಳನ್ನು ರಸ್ತೆ ಬದಿ ಬಾರದಂತೆ ನೋಡಿಕೊಳ್ಳುವುದು ಮತ್ತು ಸಾಕುವುದು, ಜಾನುವಾರುಗಳಿಂದಾಗಿ ಮುಂದೆ ಯಾವುದೇ ಅನಾಹುತಗಳು ಆದಲ್ಲಿ ಅದರ ಸಂಪೂರ್ಣ ಜವಾಬ್ದಾರಿ ಜಾನುವಾರು ಮಾಲೀಕರೇ ಆಗಿರುತ್ತಾರೆ ಮತ್ತೆ ಈ ರೀತಿಯ ದೂರಗಳು ಬಂದಲ್ಲಿ ಅಂತಹ ಮಾಲೀಕರ ಮೇಲೆ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟುನಿಟ್ಟಿನ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.