ಬಣಕಲ್ :ಚಕಮಕ್ಕಿಫ್ರೆಂಡ್ಸ್ ವತಿಯಿಂದ ನಡೆದ ರಿವರ್ಸ್ ಕಾರ್ ರೇಸ್ ಹಾಗೂ ಸ್ಲೋ ಬೈಕ್ ರೇಸ್ ನೋಡುಗರ ಮೈ ನವಿರೇಳಿಸುವಂತಿತ್ತು. ಮೂಡಿಗೆರೆ ತಾಲೂಕ್ಕಿನ ಚಕ್ಮಕ್ಕಿ ಮೈದಾನದಲ್ಲಿ ಭಾನುವಾರ ರಿವರ್ಸ್ ಕಾರ್ ರೇಸ್ ಹಾಗೂ ಸ್ಲೋ ಬೈಕ್ ರೇಸ್ ಏರ್ಪಡಿಸಲಾಗಿತ್ತು.ತಾಲ್ಲೂಕ್ಕಿನ ವಿವಿಧ ಭಾಗಗಳಿಂದ ಬಂದಿದ್ದ ಸ್ಪರ್ಧಾಳುಗಳು, ಸ್ಪರ್ಧೆಯಲ್ಲಿ ಪಾಲ್ಗೊಂಡು ನೆರೆದಿದ್ದವರನ್ನು ಮಂತ್ರ ಮುಗ್ದಗೊಳಿಸಿದರು.
ಸ್ಪರ್ಧೆಯಲ್ಲಿ ಹಿಮ್ಮುಖವಾಗಿ ಕಾರು ಚಲಾಯಿಸುವುದು ಮಾತ್ರವಲ್ಲ, ಹಾಕಿರುವ ಟ್ರ್ಯಾಕ್ ನಲ್ಲೇ ಅತಿ ವೇಗವಾಗಿ ಚಲಾಯಿಸುವುದು ಸ್ಪರ್ಧಿಗಳಿಗೆ ದೊಡ್ಡ ಸವಾಲು ಆಗಿತ್ತು. ಟ್ರ್ಯಾಕ್ ಸುತ್ತಲೂ ಜಮಾಯಿಸಿದ ಜನರು, ಶಿಳ್ಳೆ, ಚಪ್ಪಾಳೆ ಮೂಲಕ ಸ್ಪರ್ಧಿಗಳಿಗೆ ಪ್ರೋತ್ಸಾಹಿಸುತ್ತಿದ್ದರು.
ರಿವರ್ಸ್ ಕಾರ್ ರೇಸ್ ಸ್ಪರ್ಧೆಯಲ್ಲಿ ಆರ್ಯನ್ ಪ್ರಥಮ. ನಫೀಜ್ ಬಣಕಲ್ ದ್ವಿತೀಯ ಬಹುಮಾನ ಪಡೆದುಕೊಂಡರು.
ಸ್ಲೋ ಬೈಕ್ ರೇಸ್ ನಲ್ಲಿ ಸೃಜನ್ ಬೀದರಹಳ್ಳಿ ಪ್ರಥಮ ಇಮ್ರಾನ್ ಗೋಣಿಬೀಡು ದ್ವಿತೀಯ ಸ್ಥಾನ ಪಡೆದುಕೊಂಡರು.
ವರದಿ: ✍️ಸೂರಿ ಬಣಕಲ್