ಮೂಡಿಗೆರೆ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ


ಚಿಕ್ಕಮಗಳೂರು: ಕಾಫಿನಾಡಲ್ಲಿ ಗ್ಯಾಂಗೊಂದು ಮದ್ಯ ರಾತ್ರಿಯಲ್ಲಿ ಆಪರೇಷನ್ ಗೆ ಇಳಿತ್ತಿದೆ ಹಾಗೆ ಹೊತ್ತಲ್ಲದ ಹೊತ್ತಲ್ಲಿ ಸಂಚಾರ ಮಾಡೋ ಕಿರಾತಕರು ಏನು ಮಾಡುತ್ತಾರೆ ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ದಂಗಾಗಿ ಬಿಡ್ತೀರ ಅಷ್ಟರ ಮಟ್ಟಿಗೆ ಕಳ್ಳತನ ಮಾಡೋದ್ರಲ್ಲಿ ಆ ಗ್ಯಾಂಗ್ ಸೈ ಎನಿಸಿಕೊಂಡಿದೆ ಯಾರ ಭಯವಿಲ್ಲದೆ ಕಳ್ಳರ ಗ್ಯಾಂಗ್ ಮಾಡುತ್ತಿರುವ ಕಾರ್ಯಾಚರಣೆ ಖಾಕಿಗೂ ಸವಾಲಾಗಿ ಪರಿಣಮಿಸಿದೆ, ಸೋಮವಾರ ಮಧ್ಯರಾತ್ರಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,
ಅಂಗಡಿ ಮುಂಭಾಗದಲ್ಲಿ ಮಲಗಿದ್ದ ದನಗಳನ್ನು ಕದ್ದ ಕಳ್ಳರು ಅವುಗಳನ್ನು ಕಾರಿಗೆ ತುಂಬಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಜಿಲ್ಲೆಯಲ್ಲಿ ಇತ್ತೀಚೆಗೆ ದನಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಸ್ತೆ ಪಕ್ಕದಲ್ಲಿ ಮಲಗಿದ ದನಗಳನ್ನು, ಮನೆಯ ಸಮೀಪ ಕಟ್ಟಿದ ದನಗಳನ್ನೂ ಬಿಡದೇ ಕದ್ದೊಯ್ಯುತ್ತಿದ್ದಾರೆ. ಇದರಿಂದಾಗಿ ಗೋ ಸಾಕಾಣಿಕೆದಾರರಿಗೆ ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಮೂಡಿಗೆರೆ ಪಟ್ಟಣದಲ್ಲೇ ಮರುಕಳಿಸಿರುವ ಈ ಘಟನೆ ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಪ್ರತಿದಿನ ಹತ್ತಾರು ಮಲೆನಾಡು ಗಿಡ್ಡ ತಳಿಯ ಜಾನುವಾರುಗಳು ಕಾಣಬಹುದಾಗಿದೆ ಮಳೆ ಚಳಿ ಗಾಳಿಗೆ ಮೈಯೋಡ್ಡಿ ರಸ್ತೆ ಬದಿಯಲ್ಲಿ ಮಲಗಿರುತ್ತದೆ ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಿ ಬಿಡಾಡಿ ಹಸುವನ್ನು ಸೂಕ್ತ ರಕ್ಷಣೆಯೊಂದಿಗೆ ಬದುಕಲು ವ್ಯವಸ್ಥೆ ಮಾಡಿಕೊಡಬೇಕು ಅಂತಹ ಹಸುವನ್ನು ರಸ್ತೆಗೆ ಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ..