ಬಣಕಲ್: ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ಬಣಕಲ್ ನಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ನಾಡಿನ ನುಡಿ,ಜಲ, ಸಾಹಿತ್ಯ, ಸಂಸ್ಕೃತಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕಕ್ಕೆ “ಶ್ರೀ ವಿದ್ಯಾ ಕನ್ನಡ ಸೇವಾ ರತ್ನ ಪ್ರಶಸ್ತಿ” ಮತ್ತು ಸಮಾಜದಲ್ಲಿ ಯುವ ಮನಸ್ಸುಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಣಕಲ್ ನ ಫ್ರೆಂಡ್ಸ್ ಕ್ಲಬ್ ನ ಕಾರ್ಯಕ್ಕೆ “ಶ್ರೀ ವಿದ್ಯಾ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗ್ಗಿನ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ನಡೆಸಿದರು.
ನಂತರದಲ್ಲಿ ಶಾಲಾ ಮಕ್ಕಳಿಂದ ಬಣಕಲ್ ನ ಮುಖ್ಯ ಬೀದಿಗಳಲ್ಲಿ ಪಥಸಂಚಲನ ನಡೆಸಿದರು ಇದರಲ್ಲಿ ಭಾರತದ ವಾಯುಸೇನೆಯ ಶಕ್ತಿ ಪರಾಕ್ರಮವನ್ನು ಪ್ರತಿಬಿಂಬಿಸುವ ” ಆಪರೇಷನ್ ಸಿಂಧೂರ್ ” ವಿಷಯಾಧಾರಿತ ಸ್ತಬ್ಧಚಿತ್ರ ಸಾರ್ವಜನಿಕರ ಗಮನ ಸೆಳೆಯಿತು.
ನಂತರ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಣಕಲ್ ಹೋಬಳಿ ಮಟ್ಟದಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿ ಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಇವರ ಸೇವೆಯನ್ನು ವಿವರಿಸಿ ಮಾತನಾಡಿದ ಉಪಮುಖ್ಯ ಶಿಕ್ಷಕರಾದ ವಸಂತ್ ಹಾರ್ಗೋಡು ಸಮಾಜದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಯಾರೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮತ್ತು ಇಂತಹ ಎಲೆಮರೆ ಕಾಯಿಯಂತೆ ನಾಡುನುಡಿ ಬೆಳೆಸುತ್ತಾ ಯುವ ಮನಸ್ಸುಗಳಲ್ಲಿ ಸಮಾಜದ ಅರಿವನ್ನು ಮೂಡಿಸಿ ಸಮಾಜದದಲ್ಲಿ ಮಾದರಿಯ ಸೇವೆಯನ್ನು ಮಾಡುತ್ತಾ ಸಮಾಜದ ಅಸಹಾಯಕರಿಗೆ ಸಹಕಾರಿಯಾಗುವ ಇಂತಹ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸುವ ಕಾರ್ಯವನ್ನು ವಿದ್ಯಾ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ. ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯಗೌಡ. ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ನಿರ್ದೇಶಕರುಗಳಾದ ಬಿ.ಬಿ.ಮಂಜುನಾಥ್. ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಟ್ಟಗೆರೆ ಲೋಕೇಶ್ . ರಾಮಚಂದ್ರ. ಸುಪ್ರಿತ್ . ಹಾಗೂ ಪರಿಷತ್ತಿನ ಇತರ ಸದಸ್ಯರು ಫ್ರೆಂಡ್ಸ್ ಕ್ಲಬ್ ನ ಪ್ರವೀಣ್.ಅರುಣ್ ಪೂಜಾರಿ.ಹಸೈನಾರ್ . ಮತ್ತು ಸಂಘದ ಸದಸ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ಇವರೊಂದಿಗೆ ಪ್ರಾಥಮಿಕ ಮುಖ್ಯಶಿಕ್ಷಕರಾದ ನಾಗರಾಜು. ಶಿಕ್ಷಕರಾದ ಭಕ್ತೇಶ್.ಶೇಖರಪ್ಪ.ವಿಜಯೇಂದ್ರ.ಪ್ರತಾಪ್.ಲಿಂಗರಾಜು.
ಲೋಕೇಶ್.ಅಶ್ವತ್.ಲೀಲಾಮಣಿ.ಶ್ವೇತಾ.ಪದ್ಮಶ್ರೀ.ಸಂಗೀತಾ.ಕನ್ನಿಕಾ.ಗೀತಾ.ಅಶ್ವಿತಾ.ಆಶಾ.ಅನುಷ.ಪೂಜಾ.ಆರೋಗ್ಯವಾಣಿ.ಚಂದನ.ಪ್ರೀತಿ.ನೃತ್ಯ ಶಿಕ್ಷಕ ಕಿಶೋರ್ .ಶಾಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ