ಬಗ್ಗಸಗೋಡು: ಸರ್ಕಾರಿ ಶಾಲಾ ವಾರ್ಷಿಕೋತ್ಸವ. ಪೋಷಕರು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ:ಜಾಬೀರ್ ಹುಸೇನ್

ಬಣಕಲ್ : ಪೋಷಕರು ಮಕ್ಕಳನ್ನು ಬಾಲ್ಯದಿಂದಲೇ ಸಂಸ್ಕಾರಯುತರಾಗಿ ಬೆಳೆಸಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಬಗ್ಗಸಗೋಡುಶಾಲಾ ಸಮಿತಿಯ ಅಧ್ಯಕ್ಷ ಜಾಬೀರ್ ಹುಸೇನ್ ಹೇಳಿದರು.
ಅವರು ಬಗ್ಗಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ’ ಪೋಷಕರು,ಶಿಕ್ಷಕರು ಮಕ್ಕಳಿಗೆ ನೀಡುವ ಉತ್ತಮ ಸಂಸ್ಕಾರ ನೀಡುವ ಮೂಲಕ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರು,ಪೋಷಕರು ಹಾಗೂ ಸಮುದಾಯದ ಪಾತ್ರ ಬಹು ಮುಖ್ಯವಾಗಿದೆ’ಎಂದರು. ಶಿಕ್ಷಕರ ಸಂಘದ ಉಪಾಧ್ಯಕ್ಷ ಮಂಜಪ್ಪ ಮಾತನಾಡಿ’ ಇಂದಿನ ರಾಜಕೀಯ ನಾಯಕರು ಸರ್ಕಾರಿ ಶಾಲೆಯಲ್ಲೇ ಓದಿ ಆಡಳಿತ ನಡೆಸುತ್ತಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ನಾಯಕತ್ವ ಗುಣ,ಸ್ವಾಭಿಮಾನ, ಸಂಸ್ಕಾರದಿಂದ ನಡೆಯಲು ಸಾಧ್ಯವಾಗುತ್ತದೆ’ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್,ನಿವೃತ್ತ ಮುಖ್ಯ ಪಿ.ವಾಸುದೇವ್,ಗಣ್ಯರಾದ ಪುಟ್ಟರಾಜು,ಯಾಕೂಬ್, ಎ.ಸಿ.ಆಯೂಬ್,ಇಮ್ರಾನ್,ಕವೀಶ್,ಮನು,ಇಬ್ರಾಹಿಂ ಹಾಜಿ,ಶಿಕ್ಷಕ ಪ್ರೇಮ್ ಕುಮಾರ್, ರಘುನಾಥ್,ಮುಖ್ಯ ಶಿಕ್ಷಕಿ ಪ್ರೇಮ,ಶಿಕ್ಷಕಿ ವೀಣಾ,ಪಿಡಿಒ ಚಂದ್ರಾವತಿ,ಧಾನಿಗಳಾದ ರಾಬರ್ಟ್,ಶರತ್,ಬಿ.ಎ.ಉಮ್ಮರ್,ರಾಜೇಶ್,ವಿನಯ್ ಗೌಡ,ರವಿ ಬಗ್ಗಸಗೋಡು,ವಿಜಯ್ ಗೌಡ,ಪ್ರತಾಪ್ ಗೌಡ ಹಾಗೂ ಶಾಲಾ ಸಮಿತಿ ಸದಸ್ಯರು,ಅತಿಥಿ ಶಿಕ್ಷಕರು ಹಾಜರಿದ್ದರು.ಗಣ್ಯರನ್ನು ಸನ್ಮಾನಿಸಲಾಯಿತು.ಸಂಜೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.