ಬಲವಂತವಾಗಿ ಮತಾಂತರಕ್ಕೆ ಯತ್ನ? ಇಬ್ಬರ ವಿರುದ್ಧ ಆರೋಪ, ಒಬ್ಬ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ರಾಜ್ಯದಲ್ಲಿ ಆಗಾಗ ಕೇಳಿ ಬರುತ್ತಿರುವ ಮತಾಂತರ ಯತ್ನ ಪ್ರಕರಣಗಳ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಸೇರ್ಪಡೆ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೆಸವೆ ಚೌಕಿಯಲ್ಲಿ ಈ ಮತಾಂತರ ಯತ್ನ ಪ್ರಕರಣ ನಡೆದಿದೆ.

ನಾಗರಾಜ್ ಹಾಗೂ ಚಲುವರಾಜ್ ಅವರು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಕೆಸವೆಯಮನೆಯ ಗಣೇಶ ಎಂಬವರು ಕೊಪ್ಪ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ನಾಗರಾಜ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.