ಬಣಕಲ್: ನಮ್ಮಲ್ಲಿ ಸಾಧಿಸಿಯೂ ಸುಮ್ಮನೆ ತಾನಾಗಿದ್ದವನಿಗೆ ಎಲೆ ಮರೆಯ ಕಾಯಂತೆ ಇದ್ದಾನೆ’ ಎಂದು ಹೇಳುವ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸುನಿಲ್ ಎಂಬ ಸ್ಥಳೀಯ ಪ್ರತಿಭೆ.. ತನ್ನಲ್ಲಿ ಅಪಾರ ಪ್ರತಿಭೆ ಇದ್ದರೂ ಗಾಡ್ ಫಾದರ್ ಇಲ್ಲದೆ ಎಲೆ ಮರೆ ಕಾಯಿಯಂತೆ ಇದ್ದಾರೆ.
ಸುನಿಲ್ ಬಣಕಲ್ ಮತ್ತಿಕಟ್ಟೆ ಗ್ರಾಮದ ಬಡ ಕೂಲಿ ಕಾರ್ಮಿಕನ ಮಗ. ಚಿಕ್ಕಂದಿನಿಂದಲೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಪಣ ತೊಟ್ಟು ವಿದ್ಯಭ್ಯಾಸ ಮುಗಿದ ತಕ್ಷಣ ಮಂಗಳೂರಿಗೆ ಕೆಲಸ ಅರಸಿ ಹೋಗುತ್ತಾರೆ ಅಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತನ್ನ ಗಾಯನಕ್ಕೆ ಬೇಕಾಗುವ ಸಣ್ಣ ಪುಟ್ಟ ಉಪಕರಣಗಳನ್ನು ತೆಗೆದುಕೊಂಡು ಸಣ್ಣ ಪುಟ್ಟ ವಿಡಿಯೋಗಳನ್ನು ಮಾಡಿಕೊಂಡು ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿ ಜನರನ್ನು ಸೆಳೆಯುತ್ತಾ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶಿವನ ಕುರಿತು ಮಹಯೋಗಿ ಎಂಬ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ,ಸಾಹಿತ್ಯ ಸಂಗೀತದ ಜೊತೆಗೆ ಹಾಡನ್ನು ಕೂಡ ಅವರೇ ಹಾಡಿ ತನ್ನ ಪ್ರತಿಭೆಯನ್ನು ತೋರಿಸಿದ್ದಾರೆ. ಎಲೆ ಮರೆಯ ಕಾಯಿ ಯಂತಿರುವ ಪ್ರತಿಭೆಗೆ ಪ್ರೋತ್ಸಾಹ ಬೇಕಿದೆ ಸ್ಥಳೀಯ ಪ್ರತಿಭೆಯನ್ನು ಬೆಂಬಲಿಸಬೇಕಿದೆ. ಮಹಾಯೋಗಿ ವಿಡಿಯೋ ಎಲ್ಲರೂ ನೋಡಿ ಅವರ ಪರಿಶ್ರಮಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಅವರು ಇನ್ನೂ ಹಲವಾರು ವಿಡಿಯೋಗಳನ್ನು ಮಾಡಿ ಎತ್ತರಕ್ಕೆ ಬೆಳೆದು ನಮ್ಮ ಊರಿನ ಹೆಸರನ್ನು ಎಲ್ಲಡೆ ಪಸರಿಸಲಿ ಎಂಬುದು ಗ್ರಾಮಸ್ಥರ ಬಯಕೆ. ಸುನಿಲ್ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದು ಅವರು ಇನ್ನೂ ಹಲವಾರು ಗಾಯನ ರಚಿಸಿ ಹಾಡುವಂತಾಗಲಿ ಎಂಬುದು ಎಲ್ಲರ ಆಶಯ. ದಯಮಾಡಿ ಸುನಿಲ್ ಅವರ ಸುನಿಲ್ mkt ಯೂಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ ಅವರನ್ನು ಬೆಂಬಲಿಸೋಣ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ