ಮಚ್ಚಿನ ಶ್ವಾನ ಇಹಲೋಕ ತ್ಯಜಿಸಿತೆಂದು ಅಂತಿಮ ಕಾರ್ಯ ಮುಗಿಸಿ ಭಾವುಕರಾದ ಮತ್ತಿಕಟ್ಟೆಯ ಯುವಕರು


ಬಣಕಲ್ :ಮೆಚ್ಚಿನ ಶ್ವಾನ ಇಹಲೋಕ ತ್ಯಜಿಸಿತೆಂದು ಅಂತಿಮ ಕಾರ್ಯ ಮುಗಿಸಿ ಭಾವುಕರಾದ ಮತ್ತಿಕಟ್ಟೆಯ ಯುವಕರು..


ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ, ನಿಯತ್ತಿನಲ್ಲಿ ಯಾವ ಮನುಷ್ಯ ಪ್ರಾಣಿ ಕೂಡ, ಶ್ವಾನದ ಮುಂದೆ ಬರಲ್ಲ, ಅಷ್ಟು ನಿಯತ್ತಿರುವ ಪ್ರಾಣಿ. ಒಂದು ಬಾರಿ ಶ್ವಾನ ನಿಮ್ಮನ್ನು ಇಷ್ಟ ಪಟ್ಟು ನಿಮ್ಮ ಜೊತೆ ಇದೆ ಅಂದ್ರೆ, ಒಂದು ತುತ್ತು ಅನ್ನ ಹಾಕಿದರೇ ಸಾಕು ಅದರ ಕೊನೆಯ ಉಸಿರು ಇರುವ ತನಕ ನಿಮ್ಮ ಮನೆ ಕಾಯುತ್ತದೆ. ಎಸ್ ಅಷ್ಟು ನಂಬಿಗಸ್ತ ಪ್ರಾಣಿ ಅಂದ್ರೆ ಅದು ನಾಯಿ ಮಾತ್ರ.
ಮತ್ತು ಶ್ವಾನಗಳ ಬಗ್ಗೆ ಹೆಚ್ಚು ಹೇಳ ಬೇಕಿಲ್ಲ, ಅದಕ್ಕೆ ಸಾಕಷ್ಟು ಪ್ರೀತಿ ಕೊಟ್ಟು ಸಾಕುವ ಮನುಷ್ಯರಿಗೆ, ಮತ್ತು ಪ್ರಾಣಿ ಜೀವಿಗಳಿಗೆ ಮತ್ತು ಹೃದಯವಂತ ಮನುಷ್ಯರಿಗೆ ಇದರ ಬೆಲೆ ಗೊತ್ತಾಗುತ್ತದೆ.

ಆದ್ರೆ ಈ ಘಟನೆ ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ ಹಲವು ವರ್ಷಗಳಿಂದ ಗ್ರಾಮದಲ್ಲಿ ಕಾವಲುಗಾರನಾಗಿದ್ದ ಶ್ವಾನ ಒಂದುವಾರದ ಹಿಂದೆಯಷ್ಟೇ ಮರಿಗಳಿಗೆ ಜನ್ಮ ನೀಡಿತ್ತು, ಆದರೆ ದುರಾದೃಷ್ಟವಶತ್ ನಿನ್ನೆ ಸಂಜೆ ಶ್ವಾನ ದ್ವಿಚಕ್ರ ವಾಹನಕ್ಕೆ ಸಿಲುಕಿ ಮೃತಪಟ್ಟಿತ್ತು, ತಾಯಿ ಅಗಲಿದನ್ನು ಅರಿಯದ ಮರಿಗಳು ತಾಯಿ ಹಾಲಿಗೆ ಪರಿತಪಿಸುತ್ತಿದ್ದ ದೃಶ್ಯ ಕಂಡು ಗ್ರಾಮಸ್ಥರ ಕಣ್ಣಂಚಿನಲ್ಲಿ ನೀರು ಜಿನುಗುತಿತ್ತು, ಶ್ವಾನದ ಅಂತ್ಯ ಕ್ರಿಯೆಯನ್ನು ಗ್ರಾಮದ ಯುವಕರಾದ ವಿಶು, ಶಶಿ,ಇವರುಗಳು ಮನುಷ್ಯನಿಗೆ ಯಾವ ರೀತಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ಮಾಡುತ್ತಾರೋ ಅದೇ ರೀತಿ ಈ ಶ್ವಾನಕ್ಕೂ ಮಾಡಿದ್ದಾರೆ,ನಿಜಕ್ಕೂ ಮತ್ತಿಕಟ್ಟೆ ಯುವಕರ ಮಾನವೀಯ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು