ಅಬ್ಬಿ ಜಲಪಾದಲ್ಲಿ 5 ವರ್ಷದ ಬಾಲಕಿ ಜಾರಿ ಬಿದ್ದು ಸಣ್ಣಪುಟ್ಟ ಗಾಯ

ಬೆಳ್ತಂಗಡಿ : ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ‌ ಮೂಡಿಗೆರೆಯ ಬಾಳೂರು ಮಾರ್ಗವಾಗಿ ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ 17 ಮಂದಿ ಇದ್ದ ಕುಟುಂಬವೊಂದರಲ್ಲಿ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಶ್ರೇಯಾ(5) ಬಾಲಕಿ ಗಾಯಗೊಂಡಿದೆ.

ಚಾರಣಿಗರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದರು. ಈ ವೇಳೆ ಜೊತೆಯಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದಿದೆ. ಈ ವೇಳೆ ಮಗುವಿಗೆ ಮುಖ, ತಲೆಗೆ ಹೆಚ್ಚಿನ ಪೆಟ್ಟಾಗಿದ್ದು, ಮೈ ಮೇಲೆ ತರಚಿದ ಗಾಯಗಳಾಗಿವೆ. ತಕ್ಷಣ ಕುಟುಂಬಿಕರೇ‌ ರಕ್ಷಣೆ ಮಾಡಿ ಅತ್ತ ಬಾಳೂರು ಕಡೆಗೇ ಮರಳಿದ್ದಾರೆ .‌ಕಾಲ್ನಡಿಗೆ ದಾರಿ ಮೂಲಕ ತೆರಳಿ ನಂತರ ಮಗುವನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ಗಾಯಾಳುಗಳು ತಾವು ಆಗಮಿಸಿದ ಅಬ್ಬಿ ಜಲಪಾತದ ಆ ಕಡೆಯ ಬಾಳೂರು ಭಾಗವಾಗಿ ಮರಳಿದ್ದಾರೆ

ಸುದ್ದಿ ತಿಳಿದ ತಕ್ಷಣ
ಬೆಳ್ತಂಗಡಿ ಪೊಲೀಸರು ಅವರ ವ್ಯಾಪ್ತಿಯ ತನಕ ಹೋಗಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ವಾಪಸ್ಸು ಆಗಿದ್ದಾರೆ

ಅಬ್ಬಿ ಜಲಪಾತ ಬೆಳ್ತಂಗಡಿ ತಾಲ್ಲೂಕು ಮತ್ತು ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿ ಯ ಸಮೀಪದ ಭಾಗದಲ್ಲಿ ಇರುತ್ತದೆ