ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಓದು ಕಾರ್ಯಕ್ರಮ
ಚಿಂತಕ, ವಿರ್ಮಶಕ ಡಾ.ಎಸ್.ಎಸ್ ಸತ್ಯನಾರಾಯಣ ಅಭಿಮತ
ಬಣಕಲ್: ಇಡೀ ಶತಮಾನವನ್ನು ಪ್ರಭಾವಿಸಿದ ಕುವೆಂಪು ಅವರನ್ನು ಗ್ರಹಿಸುವ ಕ್ರಮವನ್ನು ಕಲಿಸಿಕೊಡುವ ಸಾರಸ್ವತ ಲೋಕದಲ್ಲಿ ಸಂಚಲನ ಉಂಟುಮಾಡಿದ ಕೃತಿ ಅಣ್ಣನ ನೆನಪು ಎಂದು ಚಿಂತಕರು ಹಾಗೂ ವಿರ್ಮಶಕರಾದ ಡಾ.ಎಸ್.ಎಸ್ ಸತ್ಯನಾರಾಯಣ ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಕೃತಿಯ ಬಗ್ಗೆ ಅವರು ಮಾತನಾಡಿದರು.
ತೇಜಸ್ವಿಯವರು ತಮ್ಮ ಬಾಲ್ಯದ ದಿನಗಳಿಂದ ವಿದ್ಯಾಭ್ಯಾಸದವರೆಗಿನ ದಿನಚರಿಯನ್ನು, ನೆನಪಿನ ಸರಣಿಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೀವನ ಚರಿತ್ರೆಯ ಕಲ್ಪನೆಯನ್ನು ಗ್ರಹಿಸುವ ಕ್ರಮವನ್ನು ಬದಲಾಯಿಸಿದ ಕೃತಿ ಅಣ್ಣನ ನೆನಪು. ಜೀವನ ಚರಿತ್ರೆ ಕೂಡ ಲೇಖಕನ ಸೃಜನಶೀಲ ಕೃತಿಯ ಹಾಗೆ ಬಹುಮುಖ ಆಯಾಮದಲ್ಲಿ ಚರ್ಚೆಯಾದ ಕೃತಿ ಅಣ್ಣನ ನೆನಪು ಎಂದರು.
ಈ ಕೃತಿಯಲ್ಲಿ ಕುವೆಂಪು ಅವರ ಬದುಕಿನ ಪುಟಗಳ ಜೊತೆಗೆ ತೇಜಸ್ವಿ ಅವರ ಆತ್ಮಕತೆಯ ಪುmಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನವಿರಾದ ಲಾಲಿತ್ಯಪೂರ್ಣ ಬರವಣಿಗೆಯ ಮೂಲಕ ಓದಿಸಿಕೊಳ್ಳುವ ಅಣ್ಣನ ನೆನಪು ಮಹತ್ವದ ಕೃತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹಿರಿಯ ಇಲೆಕ್ಟಿಯೇಷನ್ ಹಾಗೂ ಸೌಂಡ್ ಸೂಪರ್ ವೈಸರ್ ಶ್ರೀನಿವಾಸ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್ ಇದ್ದರು.