ಕುಡಿದು ದ್ವಿಚಕ್ರ ವಾಹನ ಚಾಲನೆ ತಪ್ಪಿದ ಅನಾಹುತ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲು

ಬಣಕಲ್ :ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಲಾಗದೆ ಬೈಕ್ ಸಮೇತ ರಸ್ತೆ ಬದಿಯಲ್ಲಿ ಬಿದ್ದ ಘಟನೆ ಮೂಡಿಗೆರೆ ತಾಲ್ಲೂಕು ಸಬ್ಬೆನಹಳ್ಳಿ ಬಳಿ ನಡೆದಿದೆ.

ದ್ವಿಚಕ್ರ ವಾಹನ ಓಡಿಸುತ್ತಿದ್ದ ವ್ಯಕ್ತಿ ಹಾಗೂ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಇಬ್ಬರೂ ಪಾನಮತ್ತರಾಗಿ ಬೈಕ್ ಚಲಾಯಿಸಲಾಗದೆ ಆಯತಪ್ಪಿ ರಸ್ತೆ ಬದಿಯಲ್ಲಿ ಬಿದ್ದಿದ್ದಾರೆ ಅದೃಷ್ಟವಷಾತ್ ಇಬ್ಬರು ರಸ್ತೆಗೆ ಬೀಳದೆ ರಸ್ತೆ ಬದಿಗೆ ಬಿದ್ದಿದ್ದಾರೆ.ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ವ್ಯಕ್ತಿ ಎಷ್ಟು ಕುಡಿದಿದ್ದಾರೆ ಎಂದರೆ ಇಬ್ಬರಿಗೂ ಏನು ಆಗಿದೆ ಎಂಬ ಅರಿವೇ ಇಲ್ಲದೆ ಅಲ್ಲೇ ನಿದ್ದೆಗೆ ಜಾರಿದ್ದಾರೆ.ಕತ್ತಲೆಯಾಗಿದ್ದರೆಯಾವುದಾರೂ ವಾಹನಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಸಂಜೆಯಾದ ಕಾರಣ ರಸ್ತೆಯಲ್ಲಿ ಮಲಗಿದ್ದವರನ್ನು ಗಮನಿಸಿದ ಗ್ರಾಮಸ್ಥರು ಸಾಮಜಿಕ ಕಾರ್ಯಕರ್ತ ಆರೀಫ್ ಅವರಿಗೆ ಸುದ್ದಿ ತಿಳಿಸಿದ್ದಾರೆ ಆರೀಫ್ ಅವರು ಸ್ಥಳಕ್ಕೆ ಹೋದಾಗ ಪಾನಮತ್ತರಾಗಿ ಬಿದ್ದಿರುವುದು ಕಂಡು ಬಂದಿದ್ದು ತಕ್ಷಣ ಬಣಕಲ್ ಠಾಣೆಗೆ ವಿಷಯ ಮುಟ್ಟಿಸಿ ಮುಂದೆ ಆಗುವ ಅನಾಹುತ ತಪ್ಪಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ದ್ವಿಚಕ್ರ ವಾಹನ ಹಾಗೂ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ✍️ಸೂರಿ ಬಣಕಲ್ .