ಮೂಡಿಗೆರೆ : 2019ರ ಆಗಸ್ಟ್ ತಿಂಗಳ ಮಳೆಗೆ ಕೊಚ್ಚಿ ಹೋದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆಗೆ ಯಾಕೋ ಮುಕ್ತಿ ಸಿಗುವ ಹಾಗೆ ಕಾಣ್ತಿಲ್ಲ. ಹಳ್ಳಿ ಜನರ ವ್ಯಥೆ ಕೇಳೋರು ಇಲ್ಲದಂತೆ ಕಾಣ್ತಿದ್ದು, ಎರಡು ವರ್ಷಗಳೇ ಮುಗಿಯುತ್ತ ಬಂದರೂ, ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ತಾತ್ಕಾಲಿಕವಾಗಿ ಸಂಕ ನಿರ್ಮಿಸಿದರೂ, ಅದು ಬೀಳುವ ಹಂತಕ್ಕೆ ತಲುಪಿದೆ.
2019ರ ಆಗಸ್ಟ್ ತಿಂಗಳ ರಣ ಮಳೆಗೆ ಸೇತುವೆ ಬಲಿಯಾಗಿತ್ತು. ಅಂದಿನಿಂದ ಸೇತುವೆಗಾಗಿ ಇವರ ಹೋರಾಟ ಅಷ್ಟಿಷ್ಟಲ್ಲ. ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ, ಶೀಘ್ರವೇ ಸೇತುವೆ ನಿರ್ಮಿಸ್ತೀವಿ ಅಂದಿದ್ರು. ಮತ್ತೆ ಆಕಡೆ ಮುಖ ಹಾಕಿಲ್ಲ. ಈಗ ಇಡೀ ವರ್ಷ ಸುರಿದ ಅಕಾಲಿಕ ಮಳೆಯಿಂದ ಆ ಸೇತುವೆ ಕೂಡ ದಿನ ಎಣಿಸುತ್ತಿದೆ. ಹೇಮಾವತಿಯ ವೇಗಕ್ಕೆ ಕ್ರಮೇಣ ಮಣ್ಣು ಕುಸಿಯುತ್ತಿದೆ. ಮಣ್ಣು ಕುಸಿದ್ರೆ ಕಾಲುಸಂಕಕ್ಕೆ ಗ್ರಿಪ್ ಅನ್ನೋದೇ ಇರಲ್ಲ. ಕಳಚಿ ಬೀಳೋದು ಗ್ಯಾರಂಟಿ. ಈ ಮಳೆಗಾಲಕ್ಕೆ ಫಿಕ್ಸ್. ಅಷ್ಟರಲ್ಲಿ ಸೇತುವೆ ನಿರ್ಮಿಸಿ ಅಂತ ಜನ ಪರಿಪರಿಯಾಗಿ ಬೇಡಿಕೊಂಡರೂ ಸರ್ಕಾರಕ್ಕೆ ಕಿವಿ ಕೇಳಿಸಿಲ್ಲ.ಇರುವ ಸಂಕವು ಕೊಚ್ಚಿ ಹೋದ್ರೆ ನಮ್ಮದು ಮತ್ತದೇ ಆತಂಕದ ಬದುಕು ಅನ್ನೋದು ಜನರ ಅಳಲು.
ಇನ್ನು ಈ ಕಾಲುಸಂಕದ ಮೇಲೂ ಜನ ಭಯದಿಂದಲೇ ಓಡಾಡ್ತಿದ್ದಾರೆ. ಇದರ ಮೇಲೆ ನಡೆಯುವಾಗ ಬರೋ ಶಬ್ಧ ಹಳ್ಳಿಗರನ್ನ ಮತ್ತಷ್ಟು ಕಂಗಾಲಾಗಿಸಿದೆ. ಈ ಸೇತುವೆ ಮೇಲೆ ಎಂಟಕ್ಕೂ ಹೆಚ್ಚು ಹಳ್ಳಿಯ ಜನ ಅವಲಂಬಿತರಾಗಿದ್ದಾರೆ ಈ ಸಂಕವು ಕೊಚ್ಚಿ ಹೋದರೆ ಅವರ ಬದುಕು ಮತ್ತಷ್ಟು ಅತಂತ್ರವಾಗಲಿದೆ ಎಂಟತ್ತು ಕೀಮಿ ಬಳಸಿ ಬರಬೇಕು ಜೀವ ಹೋಗೋ ಸಂದರ್ಭದಲ್ಲಿ ದೇವರೇ ಗತಿ 3 ಕೋಟಿ ಅನುದಾನ ಬಂದಿದೆ ಅಂತ ಹೇಳಿ ವರ್ಷವಾಯಿತು ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ ಸರ್ಕಾರ ಶಾಸಕರು ಸಂಸದರು ಅಧಿಕಾರಿಗಳಿಗೆ ಬೇಡಿ ಬೇಜಾರಾಗಿ ಮೋದಿಗೂ ಪತ್ರ ಬರೆದು ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದೂ ಆಯಿತು ಯಾವುದೇ ಪ್ರಯೋಜನವಾಗಿಲ್ಲ ಯಾಕೆ ಈ ತಾತ್ಸಾರ ಎಂಬುದೇ ಗೊತ್ತಾಗುತ್ತಿಲ್ಲ ಜನ ಫಾರಂ 53ರ ಅಡಿ ಜಾಗ ಕೇಳಲಿಲ್ಲ ತೋಟಕ್ಕೆ ದಾರಿ ಕೇಳಲಿಲ್ಲ ಬೆಳೆ ನಷ್ಟಕ್ಕೆ ಪರಿಹಾರ ಕೇಳಲಿಲ್ಲ ಕೇಳಿದ್ದು ಸೇತುವೆಯನ್ನಷ್ಟೇ ಆದರೆ ಸರಕಾರಕ್ಕೆ ಅದೊಂದು ಮಾಡಿಕೊಡಲು ಶಕ್ತಿ ಇಲ್ಲ ಎರಡು ವರ್ಷ ದ ಹಿಂದಿನಿಂದ ಜನ ಸೇತುವೆಗಾಗಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ ಶಾಸಕರು ಸಂಸದರಿಗೆ ಹೊಸ ಕಾರು ಖರೀದಿಗೆ ಆಸ್ತು ಅಂದಿರುವ ಸರ್ಕಾರದ ಬಳಿ ಅದಕ್ಕೆಲ್ಲಾ ದುಡ್ಡಿದೆ ಆದರೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಮಾತ್ರ ಮೀನಾ ಮೇಷ ಎಣಿಸುತ್ತಿದೆ ಇದು ಹೀಗೆಯೇ ಮುಂದುವರೆದರೆ ಮುಂದೆ ಗ್ರಾಮಸ್ಥರು ಶಾಸಕರ ಮನೆ ಮುಂದೆ ಧರಣಿ ನಡೆಸುವ ದಿನ ದೂರವಿಲ್ಲ ಎಂದು ಸಾರ್ವಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

