ಬಣಕಲ್ :ದಿನಾಂಕ 30 -8 -2024 ರಂದು ಜಿ.ಎಚ್.ಎಸ್ ಮಾಕೋನಹಳ್ಳಿ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಂಡರ್ 14 ಚೆಸ್ ಪಂದ್ಯಾವಳಿಯಲ್ಲಿ ಬಣಕಲ್ ನ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಂಜನಾ ಭಾಗವಹಿಸಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನೀಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕವೃಂದ,ವಿದ್ಯಾರ್ಥಿಗಳು ಹಾಗೂ ಪೋಷಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ವರದಿ ಸೂರಿ ಬಣಕಲ್