ಬಣಕಲ್ ಶ್ರಮ ಜೀವಿ ಆಟೋಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರಾಗಿ ಸುರೇಶ್ ಆಯ್ಕೆ

2025 ಹಾಗೂ 2026ನೇ ಸಾಲಿನ ವಾರ್ಷಿಕ ಸಭೆಯು ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರ ಸಮ್ಮುಖದಲ್ಲಿ ಸಂತೆಕಟ್ಟೆಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಕಳೆದ ವರ್ಷದ ಪದಾಧಿಕಾರಿಗಳಾದಂತಹ ಅಧ್ಯಕ್ಷರು:–ಸುರೇಶ್,, ಉಪಾಧ್ಯಕ್ಷರುಗಳು:– ಹರೀಶ್ ಚೆಗ್,,ಕೃಷ್ಣ ಗುಡ್ಡೆಟ್ಟಿ, ರಾಜೇಶ್ ಮತ್ತಿಕಟ್ಟೆ,,
ಕಾರ್ಯದರ್ಶಿ:–ಹರೀಶ್ ಅಬ್ಬಿಗುಂಡಿ
ಸಹ ಕಾರ್ಯದರ್ಶಿಗಳು:– ಗಿರೀಶ್ ಹಾಗೂ ಭರತ್ ಬಂಕೆನಹಳ್ಳಿ
ಖಜಾಂಚಿ:– ಮನು ಕೆಳ್ಳಳ್ಳಿ
ಸಹಾಯ ಖಜಾಂಚಿ:– ಸುನಿಲ್ ಚಕ್ಕಮಕ್ಕಿ ಇವರನ್ನು ಸರ್ವ ಸದಸ್ಯರ ಬೆಂಬಲದೊಂದಿಗೆ ಆಯ್ಕೆಮಾಡಲಾಯಿತು.

ಎಲ್ಲಾ ಪದಾಧಿಕಾರಿಗಳಿಗೆ ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಎಲ್ಲಾ ಸದಸ್ಯರುಗಳು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ ✍️ಸೂರಿ ಬಣಕಲ್