ಬಣಕಲ್ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ :ಜನ ಸ್ನೇಹಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

ಬಣಕಲ್ :ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ, ಸುರಕ್ಷತೆ ಮತ್ತು ನೇರ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಯೋಜನೆ, ರಾಜ್ಯದಾದ್ಯಂತ ಜಾರಿಗೆ ಬಂದಿವೆ.

ಇಂದು ಬಣಕಲ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಅವರಿಗೆ ವಿವಿಧ ಮಾಹಿತಿಯುಳ್ಳ ಕರಪತ್ರಗಳನ್ನು ನೀಡಿದರು.

ಪೊಲೀಸರ ಬಗೆಗಿನ ಕರಪತ್ರಗಳನ್ನು ನೀಡಿ, ಯಾವುದೇ ಕಾರಣಕ್ಕೂ ತಾವು ಸಾರ್ವಜನಿಕರೊಂದಿಗೆ ಇರೋದಾಗಿ ಭರವಸೆ ನೀಡಿದರು. ಸಾಮಾನ್ಯವಾಗಿ ಪೊಲೀಸರೆಂದರೆ ಇಂದಿಗೂ ಜನರಲ್ಲಿ ಭಯದ ಭಾವನೆ ಇದೆ. ಆದ್ದರಿಂದ ಅದನ್ನು ಹೋಗಲಾಡಿಸಲು ಹೊಸ ಕಾರ್ಯಕ್ರಮದ ಮೂಲಕ ಅರಿವು ಮೂಡಿಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ರವರು ಈಗಾಗಲೇ ಇಂಥ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರಗಳು ಜಾರಿಗೆ ತಂದಿವೆ. ಆದರೂ ಜನರು ಪೊಲೀಸರಿಂದ ದೂರವೇ ಇರುತ್ತಾರೆ. ಅದರಲ್ಲೂ ತಮಗೆ ಅನ್ಯಾಯವಾದಾಗಲೂ ಪೊಲೀಸರ ಬಳಿ ಹೋಗಲು ಹೆದರಿ, ಅನ್ಯಾಯವನ್ನು ಸಹಿಸಿಕೊಳ್ಳುತ್ತಾ ಬಂದಿದ್ದಾರೆ. ಇದರಿಂದಾಗಿ ದೌರ್ಜನ್ಯ ಎಸಗೋರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬೇಕೆಂದರೆ ಪೊಲೀಸರು ಜನ ಸ್ನೇಹಿಯಾಗೋದರ ಜೊತೆಗೆ ಜನರು ಕೂಡ ಪೊಲೀಸರೊಂದಿಗೆ ಸಂವಹನ ಇಟ್ಟುಕೊಳ್ಳಬೇಕಿದೆ. ಅಂದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಬರೋದಲ್ಲದೇ ಉಪಯೋಗವೂ ಆಗುತ್ತದೆ.ಎಂದರು.

ಒಟ್ಟಿನಲ್ಲಿ ಈ ಮನೆ ಮನೆಗೆ ಪೊಲೀಸರು ಅನ್ನೋ ವಿಶೇಷ ಕಾರ್ಯಕ್ರಮ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರೋ ಅನೇಕ ಅಪಾರ್ಥಗಳಿಗೆ ತಡೆ ಹಾಕುವಲ್ಲಿ ಸಹಕಾರಿಯಾಗೋದಂತೂ ಸತ್ಯ.

ವರದಿ ✍️ಸೂರಿ ಬಣಕಲ್

Sahifa Theme License is not validated, Go to the theme options page to validate the license, You need a single license for each domain name.