ಹಂತೂರು ಗ್ರಾಮ ಸಭೆಯಲ್ಲಿ ಮೊಳಗಿದ ಮತಾಂತರ ಕೂಗು


ಚಿಕ್ಕಮಗಳೂರು : ಮತಾಂತರವನ್ನು ನಿಷೇಧ ಮಾಡಬೇಕು ಹಾಗೂ ಆ ಕುರಿತಾಗಿ ವ್ಯವಹರಿಸುವ ಪ್ರತಿಯೊಬ್ಬರನ್ನೂ ಕೂಡ ತೀವ್ರವಾದ ಕಾನೂನು ಕ್ರಮಗಳ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂಬ ಕೂಗು ವಿಧಾನಸೌಧದಿಂದ ಗ್ರಾಮಸಭೆಯವರೆಗೂ ತಲುಪಿದೆ.

ಶುಕ್ರವಾರ ಹಂತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು, ಈ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಯಾದವು,ಇದರ ಮಧ್ಯೆ ಹಂತೂರು ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಾಣಿಗೆ ಮೋಹನ್ ರವರು ಮಧ್ಯ ಪ್ರವೇಶಿಸಿ, ಅವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತಾಂತರದ ಕುರಿತಾಗಿ ಜನರಿಗೆ ತಿಳಿಸಿದರು. ಹಿಂದೂ ಧರ್ಮದವರನ್ನು ಮತಾಂತರ ಮಾಡುವ ಧಂದೆ ನಡೆಯುತ್ತಿದ್ದು, ಈಗಾಗಲೆ ಕೆಲವರು ಹಣದ ಆಸೆಗೆ ಮತಾಂತರಗೊಡಿದ್ದು ಅವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರುವಂತೆ ಆಗ್ರಹಿಸಿದ್ದಾರೆ ಹಾಗೂ ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ ಪಂ ಉಪಾಧ್ಯಕ್ಷರಾದ ಕಣಚೂರು ವಿನೋದ್ ರವರು, ಗ್ರಾಮ ಸಭೆಯಲ್ಲಿ ಈ ವಿಚಾರವನ್ನು ನಿರ್ಣಯ ಮಾಡಿಕೊಂಡು ಗಂಭಿರವಾಗಿ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಎಲ್ಲಾದರೂ ಮತಾಂತರಕ್ಕೆ ಸಂಬಂದಿಸಿದಂತೆ ಗುಪ್ತ ಸಭೆಗಳು ಕಂಡಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಠಿಣ ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.

ಅದೇ ರೀತಿ ಸರ್ಕಾರಕ್ಕೆ ಗ್ರಾಮ ಸಭೆಯಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಲು ಗ್ರಾಮ ಸಭೆಯಲ್ಲಿ ಒಮ್ಮತದ ನಿರ್ಧಾರ ಮೂಡಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಪಾರ್ವತಮ್ಮ,ಸದಸ್ಯರಾದ ಪಟೇಲ್ ರಮೇಶ್,ಆದರ್ಶ್,ವಿಜಯ್ ಹಾಗೂ ಗ್ರಾ,ಪಂ ಎಲ್ಲಾ ಸದಸ್ಯರು,ಪಂ ಅ ಅಧಿಕಾರಿಗಳು,ಎಲ್ಲಾ ಇಲಾಖೆಯ ಅಧಿಕಾರಿಗಳು,ಗ್ರಾಮಸ್ಥರು ಹಾಜರಿದ್ದರು.