ಬಣಕಲ್ :ಮೂಡಿಗೆರೆ ತಾಲ್ಲೂಕ್ ಹೆಗ್ಗುಡ್ಲುನ ಕಲ್ಯಾಣಗದ್ದೆ ಸಮೀಪ ವಾರದ ಹಿಂದೆ ಬಂದ ಮಳೆಗೆ ಭಾರಿ ಗಾತ್ರದ ಹೊನ್ನೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು ವಾಹನಗಳು ಹೋಗಲಾಗದ ಕಾರಣ ಗ್ರಾಮಸ್ಥರೆಲ್ಲ ಸೇರಿ ಮರವನ್ನು ತೆರವು ಗೊಳಿಸಲು ಪ್ರಯತ್ನಿಸುತ್ತಿದ್ದರು.ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮರ ತೆರವುಗೊಳಿಸುವುದನ್ನು ಅಡ್ಡಿಪಡಿಸಿದ್ದಾರೆ…ಅರಣ್ಯ ಇಲಾಖೆಗೆ ಸೇರಿದ ಮರವಾದ್ದರಿಂದ
ಸಿಬ್ಬಂದಿಗಳು ಮರ ತೆರವುಗೊಳಿಸುವುದನ್ನು ನಿಲ್ಲಿಸಿದರು. ಅರಣ್ಯ ಸಿಬ್ಬಂದಿಗಳು ತೆರವುಗೊಳಿಸುತ್ತಾರೆ ಎಂದು ಆಶ್ವಾಸನೆ ಕೊಟ್ಟು ಹೋದವರು ಇದುವರೆಗೂ ಇತ್ತ ತಲೆ ಹಾಕಿ ಮಲಗಿಲ್ಲ ಎಂದು ಗ್ರಾಮಸ್ಥರ ಆರೋಪ ವಾಗಿದೆ . ಭೂತನ ಗುಡಿಗೆ ಹೋಗಲು ಇದೆ ಮಾರ್ಗದ ಮೂಲಕ ವಾಹನಗಳು ಹೋಗಬೇಕಿದೆ ಆಸ್ಪತ್ರೆಗೆ ಇನ್ನಿತರ ಕಾರ್ಯಗಳಿಗೆ ತೆರಳುವುದಕ್ಕೆ ಬಹಳ ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ವಾಹನಗಳಿಗೆ ಸಮೀಪ ಬರುವವರೆಗೆ ಮರ ಬಿದ್ದಿರುವುದು ಗೋಚರಿಸುವುದಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಮರ ತೆರವಿಗೆ ಮುಂದಾಗಬೇಕು ಎಂದು ಬಸನಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
