ಬಣಕಲ್ :ತಾಲೂಕಿನ ದೇವರು ಮನೆ ಕೋಗಿಲೆ ಹೋಗುವ ರಸ್ತೆಯಲ್ಲಿ ತಡೆಗೋಡೆ ಇಲ್ಲದೆ, ಪ್ರಯಾಣಿಕರು ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ಬಂದಿದೆ.
ಕೋಗಿಲೆ ರಸ್ತೆ ದೇವರ ಮನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯವೂ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಲ್ಲಿ ಈವರೆಗೂ ತಡೆಗೋಡೆ ನಿರ್ಮಿಸದ ಕಾರಣ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ರಕ್ಷ ಣೆ ಇಲ್ಲದಂತಾಗಿದೆ. ತಡೆಗೋಡೆ ಇಲ್ಲದೆ ಪ್ರಯಾಣಿಕರು ಮತ್ತು ಜನತೆ ಭಯದಲ್ಲಿ ನಿತ್ಯ ಸಂಚಾರ ಮಾಡುವಂತಾಗಿದೆ. ತಿಂಗಳಲ್ಲಿ ಹಲವು ಬಾರಿ ವಾಹನಗಳು ತಡೆ ಗೋಡೆ ಇಲ್ಲದೆ ರಸ್ತೆ ಬಿಟ್ಟುಕಂದಕಕ್ಕೆ ಉರುಳಿವೆ . ದೇವರ ಮನೆಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಜತೆಗೆ ವಾರ ಪೂರ್ತಿ ಪ್ರವಾಸಿಗರ ವಾಹನಗಳು ತಿರುಗಾಡುತ್ತಿರುತ್ತವೆ , ಪ್ರತಿ ನಿತ್ಯ ಪ್ರವಾಸಿಗರು ಜೀವ ಕೈಯಲ್ಲಿ ಹಿಡಿದು ತಿರುಗಾಡುತ್ತಿದ್ದು, ರಸ್ತೆ ಮೇಲೆ ಪ್ರಯಾಣ ಮಾಡಲು ಪ್ರತಿನಿತ್ಯ ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಡೆಗೋಡೆ ನಿರ್ಮಿಸಿ ಎಂದು ಈ ಹಿಂದೆ ಮನವಿ ಮಾಡಿದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನತೆ ಆರೋಪಿಸಿದ್ದಾರೆ.
ಪ್ರತಿನಿತ್ಯ ನೂರಾರು ಪ್ರವಾಸಿ ವಾಹನ ಸಂಚಾರದ ಜತೆಗೆ ಸಾವಿರರು ಜನ ಪ್ರಯಾಣಿಸುತ್ತಿದ್ದು ರಸ್ತೆಯ ಇಕ್ಕಲೆಗಳು ತೀರ ಅಳವಾಗಿದ್ದು, ಈ ಹಿಂದೆ ಹಲವಾರು ಬಾರಿ ಅಪಘಾತಗಳಗಿದ್ದು, ಇದರಿಂದ ಸವಾರರು ಪರದಾಡುವ ಪರಿಸ್ಥಿತಿಯಿದೆ. ಮುಂದಾಗುವ ಅನಾಹುತಕ್ಕೆ ಇಲಾಖೆಯವರು ಕಾರಣರಾಗಲಿದ್ದು, ಅತಿಶೀಘ್ರದಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯ
ಕೋಗಿಲೆ ಗ್ರಾಮದ ನಿವಾಸಿ
ಈ ಮಾರ್ಗದಲ್ಲಿ ನಾವು ನಿತ್ಯವೂ ಓಡಾಡುತ್ತೇವೆ ನಮಗೆ ರಸ್ತೆಯ ತಿರುವು ಮತ್ತು ಅಗಲದ ಬಗ್ಗೆ ಮಾಹಿತಿ ಇದ್ದರೂ ವಾಹನ ಓಡಿಸಲು ಭಯವಾಗುತ್ತದೆ ಹೊಸಬರಿಗೆ ತಿರುವುಗಳ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಅಪಘಾತವಾಗುತ್ತದೆ. ಇದನ್ನು ತಪ್ಪಿಸಲು ಶಾಶ್ವತ ತಡೆಗೋಡೆ ಮತ್ತು ಸೂಚನಾ ಫಲಕಗಳು ಬೇಕು ಹೆಚ್ಚು ಪ್ರವಾಸಿಗರು ಜತೆಗೆ, ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಪಟ್ಟಣಕ್ಕೆ ಹೋಗು ಬರುತ್ತಾರೆ. ಅದರಿಂದ ಪ್ರತಿಯೊಬ್ಬರ ರಕ್ಷ ಣೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದು ಕೋಗಿಲೆ ನಿವಾಸಿ ಗೌತಮ್ ಓತ್ತಾಹಿಸಿದ್ದಾರೆ.