ತಾಲೂಕಿನಾಧ್ಯಂತ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ-ಕೈ ನೋವು, ಜ್ವರದಿಂದ ಬಳಲುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಸಾರ್ವಜನಿಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ
ಜ್ವರ , ಗಂಟಲು ನೋವುಗಳು ಕೋವಿಡ್ ಅಲ್ಲ, ಹೆಚ್ಚಿನವು ಸಾಮನ್ಯ ಶೀತ ಜ್ವರವೇ ಆಗಿರುತ್ತವೆ. ತಾಲೂಕಿನಲ್ಲಿ ದಿನೇ ದಿನೆ ಶೀತ , ಕೆಮ್ಮು, ಮೈ-ಕೈ ನೋವು ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ 10 ಮದಿಯಲ್ಲಿ 8 ಮಂದಿಗೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ
ಸಾರ್ವಜನಿಕರು ಇದನ್ನೇ ಕೊರೊನಾ ಇರಬಹುದು ಎಂದು ಮಾನಸಿಕವಾಗಿ ಬಾವಿಸುವಂತಾಗಿದ್ದು, ಇದರಿಂದ ಗ್ರಾಮೀಣ ಭಾಗಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ನಗರದಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೇ ಕೆಮ್ಮು, ನೆಗಡಿ, ಜ್ವರ ತಪಾಸಣೆ ಮಾಡಿಸುವವರೇ ಹೆಚ್ಚಾಗಿದ್ದಾರೆ. ಇನ್ನೂ ಚಿಕ್ಕ ಮಕ್ಕಳಲ್ಲಿ ಈ ಶೀತ ಭಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ.
ಋತುಮಾನ ಬದಲಾವಣೆಯಿಂದ ಕೆಮ್ಮು, ಶೀತ, ಜ್ವರ ಹಾಗೂ ನೆಗಡಿ ಸರ್ವೇಸಾಮಾನ್ಯ . ಇದೇ ಋತುವಿನಲ್ಲಿ ಕೋವಿಡ್ ಸೋಂಕು ಉಲ್ಭಣಗೊಂಡಿರುವುದರಿಂದ ಅದರ ಲಕ್ಷಣಗಳು ಋತುಮಾನಕ್ಕೆ ಅನುಸಾರವಾಗಿ ಬರುವ ಕಾಯಿಲೆಯ ಸೋಂಕಿಗೂ ಸಾಮ್ಯತೆ ಇದೆ, ಶೀತಗಾಳಿ, ವಾತಾವರಣ ಬದಲಾವಣೆಯಿಂದ ಆರೋಗ್ಯವಂತರೂ ಸಹ ತಕ್ಷಣ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇದರಿಂದ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಸರಕಾರಿ ಆಸ್ಪತ್ರೆ ವೈದ್ಯರಾದ ಡಾ. ಇಕ್ಲಾಸ್ ಅಹಮದ್ ಅವರ ಪ್ರಕಾರ ವೈರಾಣು ಜ್ವರಕ್ಕೂ ಕೊರೋನ ಸೊಂಕಿಗೂ ಸಂಬಂಧವಿಲ್ಲ. ಮಳೆಗಾಲ ಕೊನೆಗೂಳ್ಳುವ ಸಮಯದಲ್ಲಿ ಈ ರೀತಿಯ ವೈರಾಣು ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬಿಪಿ, ಶುಗರ್, ಹೃದಯ ಸಂಬಂದಿ ಕಾಯಿಲೆ ಹೊಂದಿರುವವರು ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಜತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದರು
2ನೇ ಡೋಸ್ ಲಿಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವ ಮೂಲಕ ಕೊರೊನಾವನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ. ಮೊದಲ ಡೋಸ್ ಹಾಕಿಸಿಕೊಂಡವರು 2ನೇ ಡೋಸ್ ಹಾಕಿಸಿಕೊಳ್ಳುವಲ್ಲಿ ಹಿಂಜರಿಕೆ ಮಾಡುತ್ತಿರುವುದು ಸರಿಯಲ್ಲ. ಲಸಿಕೆಯಿಂದ ಮಾತ್ರ ಕೊರೊನಾ ತಡೆಗಟ್ಟಲು ಸಾಧ್ಯ ಎಂದು ಹಾಗೂ ವೈದ್ಯರು ಹೇಳಿದರು.
ಕೋವಿಡ್ 3ನೇ ಅಲೆಯಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಹಾಗಂತ ನಿರ್ಲಕ್ಷತೆಯೂ ಸಲ್ಲ, ಕೊರೊನಾ ದೃಡಪಟ್ಟಲ್ಲಿ ಹೋಂಐಸಲೇಷನ್ ಮಾಡಿಕೊಳ್ಳುವುದು ಉತ್ತಮ. ಉಸಿರಾಟದ ತೊಂದರೆ, 99 ಡಿಗ್ರಿ ಜ್ವರ ವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದರು.
