ಮೂಡಿಗೆರೆ :ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆಯನ್ನು ಹಿರಿಯ ಪ್ರಾಥಮಿಕ ಶಾಲೆ ಸಬ್ಬೇನಹಳ್ಳಿಯಲ್ಲಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶರತ್ ಫಲ್ಗುಣಿ, ಕಾರ್ಯದರ್ಶಿ ಪ್ರಮೋದ್, ನಿಕಟಪೂರ್ವ ಅಧ್ಯಕ್ಷರಾದ ಡಿಟಿ ನವೀನ್, ಪೂರ್ವ ಅಧ್ಯಕ್ಷರಾದ ಶ್ರೀ ಕವೀಶ್ ಜೇಸಿ ರೇಟ್ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶರತ್, ಜೇಸಿ ರೇಟ್ ಪೂರ್ವಾಧ್ಯಕ್ಷರಾದ ಶ್ರೀಮತಿ ಮಧುರ ಕವೀಶ್ ಹಾಗೂ ಜೆಜೆಸಿ ಶರದ್ವಿನ್ ಉಪಸ್ಥಿತರಿದ್ದರು.
