ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಾವಳಿಯ ಶ್ರೀ ಹೇಮಾವತಿ ನದಿಮೂಲ ಮಹಾ ಗಣಪತಿ ದೇವಸ್ಥಾನಕ್ಕೆ ಹೊರನಾಡಿನ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಬೇಟಿ ನೀಡಿ ಪರಿಶೀಲಿಸಿದರು .
ದೇವಸ್ಥಾನದ ನಿರ್ಮಾಣ ಕಾರ್ಯ ವೀಕ್ಷಿಸಿದ ನಂತರ ಯಾವುದೇ ವಿಘ್ನ ಬಾರದಂತೆ ಕಾರ್ಯ ಯಶಸ್ವಿಯಾಗಿ ಪೂರ್ಣ ಗೊಳ್ಳಲಿ,ಹೇಮಾವತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಬೇಕಾಗುವ ನೆರವನ್ನು ನೀಡಲು ನಾವು ಸಿದ್ದರಿದ್ದೇವೆ ಎಂದರು
ಯಶವಂತ್ ಗುರ್ಜರ್,ಕಾರ್ಯದರ್ಶಿ ಜಗದೀಶ್ ಗೌಡ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್, ದೇವಸ್ಥಾನದ ಸಮಿತಿಯ ಗಣಪತಿ ಆಚಾರ್, ಶ್ರೀನಾಥ್ ವಾಟೇಖಾನ್,ಶಶಿಧರ್ ,ಪರೀಕ್ಷಿತ್ ಜಾವಳಿ, ಬಿ.ಎಂ.ಸುರೇಶ್, ನಾರಾಯಣ್ ಗೌಡರು,ಲಕ್ಷ್ಮಣ್ ಗೌಡ,ಕೇಶವೇಗೌಡ,ಸುರೇಶ್ ಕಾಳಿಕಟ್ಟೆ,ಸುರೇಶ್ ಬಂಕೇನಹಳ್ಳಿ, ಅರ್ಚಕರಾದ ಅವಿನಾಶ್ ಇದ್ದರು
