ಸಬ್ಲಿ ಗ್ರಾಮದಲ್ಲಿ ದುರ್ಗಾ ಪರಮೇಶ್ವರಿ ಅಮ್ಮನವರ ಸಂಭ್ರಮದ ಕಾರ್ತಿಕೋತ್ಸವ

ಬಣಕಲ್ ಸಮೀಪದ ಸಬ್ಳಿ ಗ್ರಾಮದಲ್ಲಿ ಚಾಮುಂಡೇಶ್ವರಿ ಅಮ್ಮನವರ ಅದ್ದೂರಿ ಕಾರ್ತಿಕೋತ್ಸವ ಮಂಗಳವಾರ ವೈಭವದಿಂದ ನಡೆಯಿತು

ದೇವಾಲಯದ ಆವರಣದಲ್ಲಿ ಹಣತೆಗಳ ಬೆಳಕಿನಲ್ಲಿ ತಲ್ಲಿನರಾಗಿದ್ದ ಭಕ್ತರಲ್ಲಿ ಕಾರ್ತಿಕೋತ್ಸವ ಪುಳಕ ಸೃಷ್ಟಿಸಿತು. ಕಾರ್ತಿಕೋತ್ಸವ ವೈಭವದಲ್ಲಿ ಜಾತಿ ಮತ ಪಂಥ ಎನ್ನದೇ ಎಲ್ಲರೂ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಕಂಗೊಳಿಲಾಗಿತ್ತು. ದುರ್ಗಾ ಪರಮೇಶ್ವರಿ ವಿಗ್ರಹಕ್ಕೆ ಹೂವುಗಳಿಂದ ಅಲಂಕರಿಸಲಾಗಿತ್ತು.

ಚುಮು ಚುಮು ಚಳಿ ನಡುವೆ ಭಕ್ತರು ದೇವರ ದರ್ಶನ ಪಡೆದರು. ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಮೂಡಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಜನ ಜಂಗುಳಿಯ ನಡುವೆ  ಕಾರು, ಆಟೊ, ಹಾಗೂ ಇತರೆ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು.