ಬಣಕಲ್ ನಲ್ಲಿ ಮಳೆ ಅವಾಂತರ : ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ನೀರು


ಇಂದು ಸಂಜೆ ಬಣಕಲ್ ನಲ್ಲಿ ಸುರಿದ ಭಾರಿ ಮಳೆಗೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 
ಬಣಕಲ್ ಪಟ್ಟಣದಲ್ಲಿ ಇಂದು ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಬಿದ್ದ ಮಳೆಯಿಂದ ರಸ್ತೆಯಲ್ಲಿ ನೀರು ಭರ್ತಿಯಾಗಿ ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ. ಹೈವೇ ಪ್ರಾಧಿಕಾರದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೆ ರಸ್ತೆಗೆ ಬಂದ ನೀರು ಬದ್ರಿಯಾ ಹೋಟೆಲ್ ಹಾಗೂ ಭೈರವೇಶ್ವರ ಏಜೆನ್ಸಿ ಚಿರಾಗ್ ಇನ್ಸೂರೆನ್ಸ್ ಅಂಗಡಿಗಳಿಗೆ ನೀರು ನುಗ್ಗಿ ಅಂಗಡಿ ಮಾಲೀಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು
ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ಅಂಗಡಿ ಮಾಲೀಕರು ಪರದಾಡುವಂತಾಯಿತು.