ಬಣಕಲ್ :ಕೊರೋನಾ ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಣಕಲ್ ಗ್ರಾಮ ಪಂಚಾಯಿತಿ ಮಹತ್ವದ ನಿರ್ಣಯ ಕೈಗೊಂಡಿದೆ ಮನೆ ಮನೆಗೆ ತೆರಳಿ ಕೊರೋನ ವ್ಯಾಕ್ಸಿನ್ ಹಾಕಿಸಿಕೊಳ್ಳದ ಜನರಿಗೆ ಆದರ ಮಹತ್ವದ ಬಗ್ಗೆ ತಿಳಿ ಹೇಳಿ ಅವರಿಗೆ ಕೊರೋನಾ ಲಸಿಕೆ ಬಗ್ಗೆ ಅರಿವು ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ: ಭಾರತದಲ್ಲಿ ಕೊರೋನಾ ವೈರಸ್ (Coronavirus) ಸೋಂಕಿನ ಎರಡನೇ ಅಲೆ ನಿರೀಕ್ಷೆಗಿಂತಲೂ ಹೆಚ್ಚು ಭೀಕರವಾಗಿತ್ತು , ದಿನವೂ ಲಕ್ಷಾಂತರ ಹೊಸ ಪ್ರಕರಣಗಳು ದಾಖಲಾಗುತಿತ್ತು ಐದು-ಆರು ತಿಂಗಳ ಹಿಂದೆಯೇ ಕೊರೋನಾ ಲಸಿಕೆ ಬಂದರೂ ಜನರಲ್ಲಿ ಈಗಲೂ ವ್ಯಾಕ್ಸಿನ್ (Covid Vaccine) ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಂಗತಿ ದೇಶಾದ್ಯಂತ ವರದಿಯಾಗಿದೆ. ಕೊರೋನಾ ವೈರಸ್ ವಿರುದ್ಧ ಹಾಗೂ ಲಸಿಕೆ ಬಗ್ಗೆ ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬರುತ್ತಿದೆ ಇದೀಗ ಲಸಿಕೆ ಬಗ್ಗೆ ಹೊಸ ಅಭಿಯಾನ ಪ್ರಾರಂಭಿಸುತ್ತಿದೆ. ಕೋವಿಡ್ ವ್ಯಾಕ್ಸಿನ್ಗಳ ಮಹತ್ವ ಸೇರಿದಂತೆ ಹಲವು ಮಾಹಿತಿಯನ್ನು ಪ್ರತಿಯೊಂದು ಹಳ್ಳಿಗಳಿಗೂ ತೆರಳಿ ಮಾಹಿತಿ ತಲುಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
