ಮಲೆನಾಡಿನ ಪ್ರತಿಷ್ಠಿತ ಸಾರಿಗೆ ಸಂಸ್ಥೆ ಕಳಸದ ಕೆಕೆಬಿ ಸಾರಿಗೆ ಸಂಸ್ಥೆಯ ಕಚೇರಿಗೆ ಬಿಜೆಪಿ ಯುವಮೋರ್ಚಾ ತಂಡ ಭೇಟಿ ನೀಡಿ, ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರು ಹಲವು ಭಾಗಗಳಲ್ಲಿ ಸರ್ಕಾರಿ ಬಸ್ ಸೇವೆ ಇಲ್ಲದಿರುವುದರಿಂದ, ಕೆ ಕೆ ಬಿ ಸಾರಿಗೆ ನಂಬಿರುತ್ತಾರೆ ಶಾಲೆಗಳು ಹಾಗೂ ಉದ್ಯೋಗ ಸಾಮಾನ್ಯವಾಗಿ ಆರಂಭವಾಗಿರುವುದರಿಂದ ಕೋರೋನಾಗಿಂತಾ ಮೊದಲು ಇದ್ದ ಬಸ್ ರೂಟ್ ಬಿಡಬೇಕು, ತುರ್ತಾಗಿ ಕೊಟ್ಟಿಗೆಹಾರ ದಿಂದ ನೀಡುವಾಳೆ ಕಡೆಗೆ ತಕ್ಷಣ ಬಸ್ ನೀಡುವಂತೆ ವ್ಯವಸ್ಥಾಪಕರಿಗೆ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಮನವಿ ಸಲ್ಲಿಸಿ ಮಾಲೀಕರೊಂದಿಗೆ ಮಾತುಕತೆ ನಡೆಸಲಾಯಿತು, ಈ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿದ ಮಾಲೀಕರು ತಕ್ಷಣವೇ ಬಸ್ ಬಿಡಲು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಮಲೆನಾಡಿನ ಯಾವುದಾದರೂ ಸಾರಿಗೆ ರೋಟ್ ನಲ್ಲಿ ಬಸ್ ಬೇಕಾದರೆ ತಿಳಿಸಿದರೆ ಅಲ್ಲಿಗೆ ಹಾಗೂ ಮಲೆನಾಡಿನಲ್ಲಿ ಉತ್ತಮ ಸಾರಿಗೆ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಯುವಮೋರ್ಚ್ ತಂಡದ ಜೊತೆಗೆ ನವೀನ್ ಹಾವಳಿ , ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್ ಹರವಿನ ಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ರಾದ ಅವಿನಾಶ್ ಜನ್ನಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಚಿನ್ ಮತ್ತು ಆದರ್ಶ್, ಪ್ರಧಾನ ಕಾರ್ಯದರ್ಶಿಯಾದ ಚಿರಾಗ್ ಕೊಟ್ರುಕೆರೆ, ನಂದನ್ ನಿಡ್ನಳ್ಳಿ ಸಂಜಯ್ ಗೌಡಅಧ್ಯಕ್ಷರು ಶಾಲಾಭಿವೃದ್ಧಿ ಮಂಡಳಿ ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆ ಹಾಗೂ ಉಪಾಧ್ಯಕ್ಷರು ಜಿಲ್ಲಾ ಬಿಜೆಪಿ ಯುವ ಮೋರ್ಚಾಸದಸ್ಯರು ಇದ್ದರು
