ಮತ್ತಿಕಟ್ಟೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ನೂತನ ಘಟಕ ಅಸ್ತಿತ್ವಕ್ಕೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಣಕಲ್ ಹೋಬಳಿ ವತಿಯಿಂದ ಇಂದು ಮತ್ತಿಕಟ್ಟೆಯಲ್ಲಿ ನೂತನ ಘಟಕದ ಉದ್ಘಾಟನೆ ಮತ್ತು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಜಿ ಸಕಲೇಶಪುರ ರವರು ಕಾರ್ಯಕ್ರಮ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದೂ ಸಮಾಜವವನ್ನು ರಕ್ಷಿಸುವ ನಿಟ್ಟಿನಲ್ಲಿ ವೈರಿಗಳನ್ನು ಎದುರಿನಿಂದಲೇ ಎದುರಿಸುವ ತಾಕತ್ತು ಹಿಂದೂ ಸಮಾಜದ ಯುವಕರಿಗೆ ಬರಬೇಕು ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಪುಣ್ಯದ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಜಗತ್ತಿನಲ್ಲಿರುವ ಏಕೈಕ ಧರ್ಮ, ಅದೊಂದು ಜೀವನ ಪದ್ಧತಿ. ಕನ್ನಡ ಸಂಸ್ಕೃತಿ ದೇಶ ರಕ್ಷಣೆಗಾಗಿ ಹೋರಾಡಿದ ಮಹಿಳೆಯರಿದ್ದರೆ ಅದು ಭಾರತದಲ್ಲಿ ಮಾತ್ರ ಹಿಂದೂ ಸಮಾಜದ ತಾಕತ್ತನ್ನು ಮತ್ತೆ ನೆನಪಿಸುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮಾಡುತ್ತಿದೆ ನ್ಯಾಯ ಧರ್ಮ ಸತ್ಯಕ್ಕಾಗಿ ಹೋರಾಡಲು ಯಾರಿಗೂ ಭಯಪಡಬೇಕಾಗಿಲ್ಲ ಶ್ರೀಕೃಷ್ಣ ಮಾಡಿದ ಕೆಲಸವನ್ನು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಇಂದು ಮಾಡುತ್ತಿದ್ದು ಈ ನಿಟ್ಟಿನಲ್ಲಿ ದೇಶಾದ್ಯಂತ ಯುವಕರನ್ನು ಸಂಘಟಿಸುತ್ತಿದೆ ಎಂದರು ಕಾರ್ಯಕ್ರಮದಲ್ಲಿ ತಾಲ್ಲೂಕು ವಿ ಎಚ್ ಪಿ ಅಧ್ಯಕ್ಷರು ಮಹೇಶ್ ತಾಲ್ಲೂಕು ಭಜರಂಗದಳ ಅಧ್ಯಕ್ಷರು ವಿನಯ್ ಶೆಟ್ಟಿ ಬಣಕಲ್ ಭಜರಂಗ ದಳ ಸಂಚಾಲಕ ಅಭಿಷೇಕ್ ವಿ ಎಚ್ ಪಿ ಕಾರ್ಯದರ್ಶಿ ಅರುಣ್ ಪೂಜಾರಿ ಇದ್ದರು