ಗುರು -ಶಿಷ್ಯೆಗೆ ಚಿನ್ನದ ಪದಕ

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಥ್ರೋಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ನಗರದ ವಂದನಾ ಎಸ.ನಾಯ್ಕ್‌, ಬಿ.ಗುರುಮೂರ್ತಿ ಅವರು ಪ್ರಥಮ ಬಹುಮಾನ, ಚಿನ್ನದ ಪದಕ ವಿಜೇತರಾಗಿದ್ದಾರೆ.

ನಗರದ ಸಂತ ಜೋಸೆಫರ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ವಂದನಾ ಅವರು 18 ವರ್ಷದೊಳಗಿನವರ ಮಹಿಳಾ ವಿಭಾಗ ಹಾಗೂ ಥ್ರೋಬಾಲ್‌ ತರಬೇತುದಾರ ಗುರುಮೂರ್ತಿ ಅವರು ಹಿರಿಯ ಪುರುಷ ವಿಭಾಗದಲ್ಲಿ ಪ್ರತಿನಿಧಿಸಿದ್ದರು.


ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಕೇಂದ್ರ ಸಚಿವಾಲಯದ ಯುತ್‌ ಅಂಡ್‌ ಸ್ಪೋರ್ಟ್ಸ್‌ ಡೆವಲಪ್‌
ಮೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ವತಿಯಿಂದ ಪಂಜಾಬ್‌ನ ಅಮೃತಸರದಲ್ಲಿ ಆಗಸ್ಟ್‌ನಲ್ಲಿ ಏರ್ಪಡಿಸಿದ್ದ ನಾಲ್ಕನೇ ರಾಷ್ಟ್ರಮಟ್ಟದ ಥ್ರೋಬಾಲ್‌ ಚಾಂಪಿಯನ್‌ ಶಿಪ್‌ ಟೂರ್ನಿಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ. ವಂದನಾ ಅವರು ಗುರುಮೂರ್ತಿ ಅವರ ಶಿಷ್ಯೆ.