ದನ ಕಳ್ಳತನಕ್ಕೆ ಯತ್ನಆರೋಪಿಗಳ ಬಂಧನ

ಮೂಡಿಗೆರೆ :ದಿನಾಂಕ 24-08-2021 ರಂದು ಬೆಳಗ್ಗಿನ ಜಾವ 4 ಗಂಟೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಪಿಎಸ್ಐ ರವಿ ಜಿ. ಎ ರವರು ಸಿಬ್ಬಂದಿಯೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ ಬಿಜುವಳಿ ಗ್ರಾಮದ ಸ್ಮಶಾನದ ಬಳಿ KA 04 ಎಂ. ಎಫ 4998 ರ ಇನ್ನೋವಾ ವಾಹನದ ಹಿಂಬಾಗದ ಶೀಟ್ ನ್ನೂ ಮಡಚಿ ಅದರೊಳಗೆ ಒಂದು ಹೋರಿ ಕರುವನ್ನು ತುಂಬಿಕೊಂಡಿದ್ದು ಹಾಗೂ ಈ ಹೋರಿ ಕರುವನ್ನು ಮಾಂಸ ಮಾಡಲಿಕ್ಕಾಗಿ ಕಳ್ಳತನ ಮಾಡಿರುವುದು ಕಂಡು ಬಂದಿರುವುದರಿಂದ ವಾಹನ ಮತ್ತು ಆರೋಪಿಗಳನ್ನ ಅರೆಸ್ಟ್ ಮಾಡಿ ಮೂಡಿಗೆರೆ ಪೊಲೀಸ್ ಠಾಣೆಯ ಕೇಸ್ ನಂಬರ್ 155/2021 ಕಲಂ 11(1)(o) of prevention cruelty of animal act, 4,12,5,7 of Karnataka prevention of slaughter and prevention of cattle ordinance act, 379 IPC ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು

  1. ನಿಜಾಮುದ್ದೀನ್ ಬಿನ್ ಮಹಮ್ಮಡ್ 23 ವರ್ಷ ವಾಸ ಬಂಟ್ವಾಳ ದ.ಕ. ಜಿಲ್ಲೆ
  2. ಆಶಿಕ್ ಪಾಷಾ ಬಿನ್ ಸೈಯದ್ ಮುಜೀಬ್ 23ವರ್ಷ ವಾಸ ಬಂಟ್ವಾಳ ದ.ಕ. ಜಿಲ್ಲೆ
  3. ಮಹಮ್ಮದ್ ಮಸೂರ ಬಿನ್ ಅಬೂಬಕ್ಕರ್ 20 ವರ್ಷ ವಾಸ ಬಂಟ್ವಾಳ ದ.ಕ. ಜಿಲ್ಲೆ.