ಬಣಕಲ್ ಶ್ರಮಜೀವಿ ಆಟೋ ಚಾಲಕರು ಮತ್ತು ಮಾಲೀಕರು ಸಂಘದ ವತಿಯಿಂದ ನಡೆದ 3 ವರ್ಷದ ಮಿನಿ ಕ್ರಿಕೇಟ್ ಶ್ರಮಜೀವಿ ಕಪ್ 2026 ಪಂದ್ಯಾವಳಿಯನ್ನು ಬಣಕಲ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಈ ಪಂದ್ಯಾವಳಿಯಲ್ಲಿ ಹಲವಾರು ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದೆ.
ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ಬಹುಮಾನವನ್ನು ಟ್ರೋಪಿಯೊಂದಿಗೆ 7000 ಸಾವಿರ ನಗದು ರೂಗಳನ್ನು ಅಜಯ್ ಮಾಲೀಕತ್ವದ ಶ್ರಮಜೀವಿ ಸ್ಟೈಕರ್ಸ್ ಪಡೆದುಕೊಂಡರೆ ದ್ವಿತೀಯ ಬಹುಮಾನ ಟ್ರೋಪಿಯೊಂದಿಗೆ 4000 ಸಾವಿರ ನಗದು ರೂಗಳನ್ನು ದೇವರಾಜು ಸಬ್ಲಿ ಮಾಲೀಕತ್ವದ ಶ್ರಮಜೀವಿ ಲಾಸ್ಟ್ ಬೆಂಚ್ ಟೈಗರ್ಸ್,ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಕಿಟ್ಟಿ ಮಾಲೀಕತ್ವದ ಶ್ರಮಜೀವಿ ಆದ್ಯ ಪ್ರೆಂಡ್ಸ್ ತಂಡ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಶ್ರಮಜೀವಿ ಆಟೋ ಚಾಲಕರು ಮತ್ತು ಮಾಲೀಕರು ಸಂಘದ ಅಧ್ಯಕ್ಷ ರೋನಿ,ರವೀಂದ್ರ,ದಯಾಕರ,ದೇವರಾಜು ಸಬ್ಲಿ,ಫಯಾಜ್,ಲತೀಫ್,ರಘು,ಕಿಟ್ಟಿ,ಸುರೇಶ್,ಸಲಾಂ,ಕಲ್ಲೇಶ್ ರಾಜೇಶ್,ಮುಂತಾದವರಿದ್ದರು.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ