ಬಣಕಲ್ ಶ್ರಮ ಜೀವಿ ಆಟೋ ಚಾಲಕರಿಂದ ಆಟೋ ನಿಲ್ದಾಣಕ್ಕೆ ಒತ್ತಾಯ


ಬಣಕಲ್ ನಲ್ಲಿ ಹಲವು ವರ್ಷಗಳಿಂದ ಆಟೋರಿಕ್ಷಾ ಗಳಿಗೆ ಆಟೋ ನಿಲ್ಲಿಸಲು ನಿಲ್ದಾಣವಿಲ್ಲದೆ ಖಾಸಗಿ ಸ್ಥಳದಲ್ಲಿ ಆಟೋ ನಿಲ್ಲಿಸುವಂತಾಗಿದೆ ಅಂಗಡಿ ಮುಗ್ಗಟ್ಟುಗಳ ಮುಂದೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸುವಂತಾಗಿದೆ ಈಗ ಮಳೆಗಾಲ ವಾಗಿರುವುದರಿಂದ ಹೆದ್ದಾರಿ ಅಗಲೀಕರಣ ಕಾರ್ಯ ಸ್ಥಗಿತಗೊಂಡಿದೆ ಹೆದ್ದಾರಿ ಕಾರ್ಯ ಪ್ರಾರಂಭಗೊಂಡರೆ ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಸ್ಥಳವೇ ಇರುವುದಿಲ್ಲ ಗ್ರಾಮ ಪಂಚಾಯಿತಿಯಿಂದ ಸರಕಾರಿ ಜಾಗ ಗುರುತಿಸಿ ಆಟೋ ನಿಲ್ದಾಣಕ್ಕೆ ಎಲ್ಲಾದರೂ ವ್ಯವಸ್ಥೆ ಮಾಡಬೇಕಾಗಿದೆ ಗ್ರಾಮ ಪಂಚಾಯಿತಿಗೆ ಆಟೋ ಸಂಘ ದಿಂದ ಮನವಿ ಪತ್ರ ಕೂಡ ಕೊಡಲಾಗಿದೆ ಹೆದ್ದಾರಿ ಕಾಮಗಾರಿಯಿಂದ ವಾಹನ ನಿಲುಗಡೆ ಕಷ್ಟ ಸಾಧ್ಯವಾಗಿದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಲು ಸಾಧ್ಯವಿಲ್ಲ ಅಂಗಡಿಗಳ ಮುಂದೆ ನಿಲ್ಲಿಸಿದರೆ ಅಂಗಡಿ ಮಾಲೀಕರು ವ್ಯಾಪಾರಕ್ಕೆ ಅಡ್ಡಿಯಾಗುತ್ತದೆ ಎಂದು ನಿಲ್ಲಿಸಲು ಬಿಡುವುದಿಲ್ಲ ಬಣಕಲ್ ನಲ್ಲಿ 100 ಕ್ಕಿಂತ ಅಧಿಕ ಆಟೋಗಳು ಇವೆ ಆದರೆ ಅದಕ್ಕೆ ಒಂದು ಸರಿಯಾದ ನಿಲ್ದಾಣವಿಲ್ಲ ದಯವಿಟ್ಟು ಜನಪ್ರತಿನಿದಿಗಳು ಹಾಗೂ ಗ್ರಾಮ ಪಂಚಾಯಿತಿಯವರು ನಮಗೆ ಒಂದು ನೆಲೆ ಒದಗಿಸಬೇಕು ಎಂದು ಶ್ರಮ ಜೀವಿ ಆಟೋ ಸಂಘದಿಂದ ಮನವಿ ಮಾಡಿಕೊಂಡಿದ್ದಾರೆ ಶ್ರಮ ಜೀವಿ ಆಟೋ ಸಂಘದ ಅಧ್ಯಕ್ಷ ರೋನಲ್ದೊ ಡಿಸೋಜ ಮಾತನಾಡಿ ಬಣಕಲ್ ನಲ್ಲಿ ಆಟೋ ನಿಲ್ಲಿಸಲು ಸ್ಥಳವಕಾಶವಿಲ್ಲದೆ ರಸ್ತೆ ಪಕ್ಕದಲ್ಲೇ ಆಟೋ ನಿಲ್ಲಿಸುತ್ತಿದ್ದೇವೆ ಇದರಿಂದ ಸಂಚಾರ ದಟ್ಟನೆಯಾಗುತ್ತಿದ್ದು ತುಂಬಾ ತೊಂದರೆಯಾಗುತ್ತಿದೆ ರಸ್ತೆಯ ಬದಿಗಳು ವಿಸ್ತರಣೆಯಾಗಿರುವುದರಿಂದ ಅಂಗಡಿಗಳು ಕೂಡ ರಸ್ತೆಯ ಅಂಚಿಗೆ ಇರುವುದರಿಂದ ಅಂಗಡಿ ಮುಂದೆ ಆಟೋಗಳು ನಿಲ್ಲಿಸಲು ಆಗುತ್ತಿಲ್ಲ ಇದರಿಂದ ಆಟೋ ಚಾಲಕರು ಬದುಕು ಕಟ್ಟಿಕೊಂಡು ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ ಎಂದರು