ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಎಲ್ಲರಿಗೂ ಗೊತ್ತಿರುವಂತದ್ದೇ. ಅದೇನು ಮಹಾ, ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರ್ಕಾರ ಸ್ಥಾಪನೆಯಾದ ದಿನ ಎಂದು ಮೂಗು ಮುರಿಯುವವರ ಸಂಖ್ಯೆ ದೊಡ್ಡದಾಗುತ್ತಿದೆ. ವಿಶೇಷವಾಗಿ ಈ ವರ್ಗದಲ್ಲಿ ಹೆಚ್ಚಾಗಿ ಕಂಡು ಬರುವುದು ನಮ್ಮ ಯುವ ಸಮುದಾಯ. ಅಂದು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಇಂದು ನಾವೇನು ಮಾಡುವುದು? ಎಂದು ಹಲವರು ಪ್ರಶ್ನೆ ಕೇಳುತ್ತಾರೆ.
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧ ಮಾದರಿಯ ಒಂದು ಸಂದೇಶ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್ಆ್ಯಪ್ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ.
ಮತ್ತೆ ಹಲವರು ಇಂತಹ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿತೆಂದು ಪ್ರವಾಸಕ್ಕೆ ಹೊರಡುತ್ತಾರೆ. ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಹಾಕುವ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇಲ್ಲವೇ ನಿದ್ದೆ ಹೊಡೆಯುತ್ತಾರೆ.
ಈ ಸಲದ ಸ್ವಾತಂತ್ರ್ಯ ದಿನಾಚರಣೆ ವಿಶೇಷ ವಾಗಿ ಮಕ್ಕಳಿಗೆ ಬೇಸರದ ವಿಷಯ ಯಾಕೆಂದರೆ ಕೊರೋನದಿಂದ ಶಾಲೆ ಮುಚ್ಚಿರುವುದರಿಂದ ಮಕ್ಕಳು 2ವರ್ಷಗಳಿಂದ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಇದೆಲ್ಲದಕ್ಕೂ ತದ್ವಿರುದ್ದವಾಗಿ ಗುಲ್ಲನ್ ಪೇಟೆಯ ಮಕ್ಕಳು ಮನೆಯಲ್ಲೇ ಸೇರಿ ಧ್ವಜಾರೋಹಣ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಮನೆ ಮುಂದೆ ಭಾರತಾಂಬೆಯ ಚಿತ್ರವನ್ನು ಹೂವಿನಿಂದ ಸಿಂಗರಿಸಿದ್ದರು ಹಾಗೆ ಭಾರತ ಮಾತೆಯ ಹಾಡಿಗೆ ನೃತ್ಯ ಮಾಡುವ ಮೂಲಕ ಸಂಭ್ರಮದದಿಂದ ಕುಣಿದು ಕುಪ್ಪಳಿಸಿದರು ಇದು ನಿಜಕ್ಕೂ ಮಕ್ಕಳ ದೇಶ ಪ್ರೇಮಕ್ಕೆ ಇಡಿದ ಕನ್ನಡಿಯಾಗಿದೆ
ನಿಜಕ್ಕೂ ಸ್ವಾತಂತ್ರ್ಯ ದಿನಾಚರಣೆ ಎಂಬುದು ಬಲು ದೊಡ್ಡ ಹಬ್ಬ, ಉತ್ಸವ. ಅಂದು ದಸರೆಯ ಪಂಜಿನ ಕವಾಯತಿಗೆ ಸೇರುವಷ್ಟು ಜನ ಸೇರಬೇಕು. ರಾಷ್ಟ್ರಗೀತೆಯನ್ನು ಒಕ್ಕೊರಲಿನಿಂದ ಹೇಳಬೇಕು. ರಾಷ್ಟ್ರಧ್ವಜಕ್ಕೆ ವಂದಿಸಬೇಕು ಇದು ನಡೆದುಕೊಂಡ ಬದ್ದ ಪದ್ಧತಿ