ಹೆಗ್ಗುಡ್ಲು ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವು : ಮಂಜುಳಮ್ಮ ನವರ ಕಾನೂನು ಹೋರಾಟಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಹೆಗ್ಗುಡ್ಲು ಗ್ರಾಮದ ಒತ್ತುವರಿ ಆಗಿದ್ದ ಸರ್ಕಾರಿ ಶಾಲಾ ಭೂಮಿಯನ್ನು ಮರಳಿ ಶಾಲೆಗೆ ಕೊಡಿಸುವಲ್ಲಿ ಮಂಜುಳಮ್ಮ ರವರ ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಹೋಬಳಿಯ ಸರ್ಕಾರಿ ಶಾಲೆಯ 9.5 ಗುಂಟೆ ಜಾಗ ಭೂಮಿ ಒತ್ತುವರಿ ಆಗಿತ್ತು
ಶಾಲೆ ಒತ್ತುವರಿ ವಿರುದ್ಧ ಮಂಜುಳಮ್ಮ ರವರು ಮೊದಲು ಧ್ವನಿ ಎತ್ತಿದ್ದರು ಯಾವುದೇ ಕಾರಣಕ್ಕೂ ಶಾಲಾ ಭೂಮಿ ಶಾಲೆಗೆ ಕೊಡಿಸುವವರೆಗೂ ಬಿಡುವುದಿಲ್ಲ ಎಂದು ಪಣ ತೊಟ್ಟ ಮಂಜುಳಮ್ಮ ರವರು ನಿರಂತರ ಹೋರಾಟ ನಡೆಸಿದ್ದರು.

ಹೋರಾಟಕ್ಕೆ ಅವರು ಸ್ವಂತ ಖರ್ಚಿನಲ್ಲಿ ಶಾಲಾ ಭೂಮಿ ಉಳಿವಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ವರ್ಷಗಳ ಹೋರಾಟಕ್ಕೆ ಕೊನೆಗೂ ಜಯಸಿಕ್ಕಿದೆ.

ಮಾನ್ಯ ಶಾಸಕರು ತಹಶೀಲ್ದಾರ್ ರವರು ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು ಇವರೆಲ್ಲರ ಸಹಕಾರದಿಂದ ಭೂಮಿ ಶಾಲೆಗೆ ಮರಳಿ ಸಿಕ್ಕಿದೆ.

ಶ್ರೀಮತಿ ಮಂಜುಳಮ್ಮ ಅವರ ಸತತ ಹೋರಾಟದ ಫಲಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ
ಪ್ರಶಂಸೆ ವ್ಯಕ್ತವಾಗಿದೆ.