ರಸ್ತೆ ಬದಿಯಲ್ಲಿ ಬೆಳೆದ ಗಿಡ ಗಂಟಿಗಳ ತೆರವು ಶೀಘ್ರ ಸ್ಪಂದನೆಗೆ ಮೆಚ್ಚುಗೆ


ಬಣಕಲ್ ನ ವಾಜಪೆಯಿ ನಗರದ ಪಾದಚಾರಿ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಗಿಡ ಗಂಟಿಗಳಿಂದ ಕಿರು ರಸ್ತೆಗಳಂತಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದರು. ಪೊದೆಗಳಿಂದಾಗಿ ವಿಷ ಜಂತುಗಳು ರಸ್ತೆಗೆ ಬರುತ್ತಿತ್ತು.ಇದರಿಂದ ನಿವಾಸಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಅಪಾಯ ಉಂಟಾಗುವ ಸಂಭವ ಇತ್ತು. ಈಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಾಜ್ ರವರ ಗಮನಕ್ಕೆ ತರಲಾಯಿತು ತಕ್ಷಣಕ್ಕೆ ಸ್ಪಂದಿಸಿದ ಅವರು ಯಂತ್ರಗಳ ಮೂಲಕ ರಸ್ತೆ ಬದಿಯಲ್ಲಿ ಬೆಳೆದ ಪೊದೆಗಳನ್ನು ತೆರವುಗೊಳಿಸಿಕೊಟ್ಟರು.


ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್ ರವರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತವಾಗಿದೆ.