ಮೂಡಿಗೆರೆ ತಾಲ್ಲೂಕ್ಕಿನ ದೇವರು ಮನೆಗೆ ಹೋಗುವ ಕೋಗಿಲೆ ಅರಣ್ಯ ಪ್ರದೇಶದ ಗುಡ್ಡದಲ್ಲಿ ಪ್ರವಾಸಿಗರು ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಗಳನ್ನು ನಡೆಸುವುದು ಪೋಲೀಸರ ಕಣ್ತಪ್ಪಿಸಿ ಮಾಡುತ್ತಿದ್ದರು.

ಗ್ರಾಮಸ್ಥರು ಪ್ರವಾಸಿಗರಿಗೆ ಹಲವು ಭಾರಿ ಬಗ್ಗೆ ಎಚ್ಚರಿಕೆ ನೀಡಿದರೂ ಕೂಡ ಗ್ರಾಮಸ್ಥರ ಕಣ್ತಪ್ಪಿಸಿ ಹೋಗುತ್ತಿದ್ದರು. ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಾಗ ಇಂದು ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿಗಳು ವಾಚ್ ಟವರ್ ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಜೆ ಸಿ ಬಿ ಮುಖಾಂತರ ಕಟ್ ಮಾಡಿದ್ದಾರೆ. ಇದರಿಂದ ಯಾವುದೇ ವಾಹನಗಳು ಆ ಪ್ರದೇಶಕ್ಕೆ ಹೋಗದಂತೆ ತಡೆದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ