ಬಣಕಲ್ ನಜರೆತ್ ಶಾಲೆಯಲ್ಲಿ ನಡೆದ ಐಸಿಎಸ್ಇ ವಲಯ ಮಟ್ಟದ ಕ್ರೀಡಾಕೂಟ :ನಜರೆತ್ ಶಾಲಾ ವಿದ್ಯಾರ್ಥಿಗಳ ಸಾಧನೆ

ಬಣಕಲ್ :ನಜರೆತ್ ಶಾಲೆ ಬಣಕಲ್ಲಿನಲ್ಲಿ ನಡೆದ 7 ಜಿಲ್ಲೆಗಳನ್ನೊಳಗೊಂಡ ಐಸಿಎಸ್ಇ ಶಾಲೆಗಳ ವಲಯ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಯಲ್ಲಿ ನಜರೆತ್ ಶಾಲೆಯ 19ರ ವಯೋಮಾನದ ಬಾಲಕಿಯರ ತಂಡ ವಾಲಿಬಾಲ್ ಮತ್ತು ಥ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಮತ್ತು 19 ರ ವಯೋಮಾನದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.