ಭಾರಿ ವಾಹನಗಳಿಗೆ ನಿಷೇಧ ಇದ್ದರೂ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಬಿಟ್ಟ ಪೊಲೀಸರು: ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಿದ 12 ಚಕ್ರದ ವಾಹನ

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಿದ್ದರೂ ಚಾರ್ಮಾಡಿ ಚೆಕ್ ಪೊಸ್ಟ್ ಮೂಲಕ KMF ನ ಹಾಲಿನ 12 ಚಕ್ರದ ಟ್ಯಾಂಕರ್ ಲಾರಿಯೊಂದು ಇಂದು ಸಂಜೆ ಸಂಚರಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪೊಲೀಸರು ತಡೆದು ನಿಲ್ಲಿಸಿದ್ದಾರೆ.