ಬಣಕಲ್ ಬಸ್ ತಂಗುದಾಣ ನಿರ್ಮಾಣಕ್ಕೆ ಸ್ಥಳ ದಾನವಾಗಿ ನೀಡಿದ ದಿ/ನಾರಾಯಣ ಗೌಡ ರ ಪುತ್ರ ದಿವ್ಯ ಗೌಡರಿಗೆ ಸನ್ಮಾನ

ಬಣಕಲ್ :ಬಣಕಲ್ ನಲ್ಲಿ ಹಲವಾರು ವರ್ಷಗಳ ಕಾಯುವಿಕೆಗೆ ಕೊನೆಗೂ ಬಸ್ ತಂಗುದಾಣ ನಿರ್ಮಾಣ ವಾಗುವುದರೊಂದಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಈ ಬಸ್ ತಂಗುದಾಣವಾಗಲು ಮೂಲ ಕಾರಣಕರ್ತರು ಬಣಕಲ್ ವಿಲೇಜ್ ನ ದಿವಂಗತ ನಾರಾಯಣ ಗೌಡರು.

ಹಲವು ವರ್ಷಗಳ ಹಿಂದೆಯೇ ತಂಗುದಾಣದ ಸ್ಥಳವನ್ನು ನಾರಾಯಣ ಗೌಡರು ದಾನವಾಗಿ ನೀಡಿದ್ದರು. ಇಂದು ಅವರು ನೀಡಿದ ಸ್ಥಳದಲ್ಲಿ ಬಸ್ ತಂಗು ದಾಣ ನಿರ್ಮಾಣವಾಗಿರುವುದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಸಹಕಾರಿಯಾಗಿದೆ.

ಮಂಗಳವಾರದಂದು ಬಣಕಲ್ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಧಿಕಾರಿಗಳು ನಾರಾಯಗೌಡರ ಮನೆಗೆ ಭೇಟಿ ನೀಡಿ ನಾರಾಯಣ ಗೌಡರ ಪುತ್ರ ದಿವ್ಯ ಗೌಡರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಝರಿನ, ಪಿ ಡಿ ಓ ಕೃಷ್ಣಪ್ಪ ಸದಸ್ಯರಾದ ಮಧುಕುಮಾರ್. ಇರ್ಫಾನ್ ಹಾಜರಿದ್ದರು.

ವರದಿ ✍️ಸೂರಿ ಬಣಕಲ್