ಮೂಡಿಗೆರೆ ತಾಲೂಕು ಬಾಳುರು ಹೋಬಳಿ ಮರ್ಕಲ್ ಗ್ರಾಮದದಲ್ಲಿ ಸಹಿಸಲಾಗದ ಮನಕಲಕುವ ಘಟನೆಯೊಂದು ನೆನ್ನೆ ನಡೆದಿದೆ.
ಮರ್ಕಲ್ ಗ್ರಾಮದ ಮಂಜುನಾಥ್ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಇನ್ನೇನು ಕೆಲವೆ ದಿನದಲ್ಲಿ ಗರ್ಭದಾರಣೆ ಮಾಡಬೇಕಿದ್ದ ಹಸುವನ್ನು ಇದೆ ಗ್ರಾಮದ ಮರ್ಕಲ್ ಎಸ್ಟೇಟ್ ಗೆ ಕೆಲಸಕ್ಕೆ ಬಂದಿದ್ದ ಅಸ್ಸಾಂ ನ ಕೂಲಿ ಕಾರ್ಮಿಕರು ಹಗ್ಗವನ್ನು ಕತ್ತರಿಸಿ ಕಳ್ಳತನ ಮಾಡಿ ತೋಟದ ಒಳಗೆ ಮಾಂಸ ಮಾಡಿದ ಕ್ರೂರ ಘಟನೆ ನಡೆದಿದೆ.
ವಿಷಯ ತಿಳಿದ ಕೂಡಲೆ ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಅವರು ಸ್ಥಳಕ್ಕೆ ಭೇಟಿಕ್ಕೊಟ್ಟು ಈ ಕೃತ್ಯ ನಡೆಸಿದ ಅಸ್ಸಾಂ ನ ಆರು ಕಾರ್ಮಿಕರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಮಲೆನಾಡಿನ್ನಲ್ಲಿ ಅಸ್ಸಾಂ ಕಾರ್ಮಿಕರ ಇಂತಹ ಹಲವಾರು ಪ್ರಕರಣಗಳು ದಾಖಲಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಇಲ್ಲವಾದರೆ ಮುಂದೊಂದು ದಿನ ಉಗ್ರಹೋರಾಟ ಮಾಡಲಾಗುಹುದು ಎಂದು ಹಿಂದೂ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.