ಗುಡ್ಡಹಟ್ಟಿ ಅರಣ್ಯ ದಲ್ಲಿ ಮರಗಳ ಕಳವು,ಅರಣ್ಯ ಇಲಾಖೆ ಸಿಬ್ಬಂದಿಗಳ ಕೈವಾಡ

.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಗಿದೆ.

ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ,ಮೂಡಿಗೆರೆ ವಲಯದ ,ಬಣಕಲ್ ಸರ್ವೇ ನಂಬರ್ 254ರ ಗುಡ್ಡಹಟ್ಟಿ ಇಲಾಖಾ ಅರಣ್ಯ ನೆಡುತೋಪು ನಲ್ಲಿ ಕಾಡು ಮರಗಳ ಕಳವು ಪ್ರಕರಣ ವರದಿಯಾಗಿದೆ.
ಇಲ್ಲಿನ ಹಲವಾರು ಅಕೇಶಿಯಾ ಮರಗಳಗಳನ್ನು ಕಡಿದು ಕದ್ದು ಸಾಗಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಫಾರೆಸ್ಟರ್ ಬಸವರಾಜ್, ಗಾರ್ಡ್ ಶಂಕರ್ ಎಂಬುವವರು ಕದ್ದು ಸಾಗಿಸಿ ,ಬಣಕಲ್ ಟೌನ್ ನಲ್ಲಿ ಮರಗಳನ್ನು ಸಾಮಿಲ್ ಗೆ ಸಾಗಿಸಿದ್ದರು.
ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಾವ್ಯ ಖಚಿತ ಮಾಹಿತಿ ಮೇರೆಗೆ ನೆನ್ನೆ ಬುಧುವಾರ, ಬಣಕಾಲ್ ಸಾಮೀಲ್ ಸ್ಥಳಕ್ಕೆ ಹೋಗಿ ಕಾಡು ಮರಗಳನ್ನು ವಶಕ್ಕೆ ಪಡೆದು ಪ್ರಕರಣ ತನಿಖೆ ಮಾಡುತ್ತಿದ್ದಾರೆ.

ಸಾಮಿಲ್ ಮಾಲೀಕ ಮೂರ್ತಿ ಹೇಳುವ ಪ್ರಕಾರ ಇಲಾಖೆಯ ಸಿಬ್ಬಂದಿಗಳೇ ಇದನ್ನು ತಂದು ಕೊಟ್ಟು ಕಟಾವು ಮಾಡಿಕೊಡಲು ಹೇಳಿದ್ದಾರೆ ಎನ್ನಲಾಗಿದೆ.


ಈ ಕುರಿತು ಸ್ಥಳೀಯರು ಹೇಳುವುದು ಇಲ್ಲಿ ಈ ರೀತಿ ಅನೇಕ ಪ್ರಕರಣಗಳು ವರದಿಯಾಗಿವೆ..ಇಲ್ಲಿ ಇಲಾಖೆಯವರೇ ಮರಗಳ ಕಳ್ಳ ಸಾಗಣೆಗೆ ನಿಂತಿದ್ದಾರೆ. ರಕ್ಷಕರೆ ಇಲ್ಲಿ ಭಕ್ಷಕರಾಗಿದ್ದಾರೆ.
ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಪರಿಸರವಾದಿ ಆರೋಪಿಸಿದ್ದಾರೆ

ಹಸಿರು ಫೌಂಡೇಶನ್(ರಿ ) ಇದರ ಸದಸ್ಯರಾದ ರತನ್ ಊರ್ಬಾಗೆ ಇವರು ಮಾತನಾಡಿ ಈ ಕೂಡಲೇ ಇಂತಹ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಪ್ರಕರಣ ದಾಖಲು ಮಾಡಬೇಕು. ಇಂಥವರಿಂದ ಅರಣ್ಯ ಇಲಾಖೆಗೂ ಕೆಟ್ಟ ಹೆಸರು ಬರುತ್ತದೆ.
ಇಲ್ಲಿ ಸಿಬ್ಬಂದಿಗಳು ಯಾರಿಗೂ ಹೆದರದೆ ಅಕ್ರಮಗಳಲ್ಲಿ ಭಾಗಿಯಾಗಿ ರಾಜಾರೋಷವಾಗಿ ಇದ್ದಾರೆ.
ಅರಣ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಇಂತಹ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅರಣ್ಯ ಮತ್ತು ಪರಿಸರವನ್ನು ಉಳಿಸಬೇಕೆಂದು ಮನವಿ ಮಾಡುತ್ತಾರೆ.