ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್, JCI ಬಣಕಲ್ ವಿಸ್ಮಯ ಹಾಗು ಗ್ರಾಮ ಪ೦ಚಾಯಿತ್ ಬಣಕಲ್ ಇವರ ಸ೦ಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ದಿನಾಂಕ: 17 ಮೇ 2025 ಶನಿವಾರದ೦ದು ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇಲ್ಲಿ ನಡೆಸಲಾಯಿತು. ಶಿಬಿರದಲ್ಲಿ ಉಚಿತ ಬೆನ್ನುಮೂಳೆ ತಪಾಸಣೆಯನ್ನು ಡಾ. ವೈಶಾಕ್ ಬಿ ಭಟ್(ಬೆನ್ನುಮೂಳೆಯ ಶಸ್ತ್ರ ಚಿಕಿತ್ಸಾ ತಜ್ಞರು, ಕೆ.ಎ೦. ಸಿ. ಆಸ್ಪತ್ರೆ ಅತ್ತಾವರ) ಇವರಿ೦ದ ಹಾಗು ಮೂಳೆ ಆರೋಗ್ಯ ತಪಾಸಣೆ ಉಚಿತ BMD (Bone Mineral Density test), ಮೂಳೆ ಮತ್ತು ಕೀಲು ಸಂಬಂಧಿತ ಸಮಸ್ಯೆಗಳಿಗೆ ಸಲಹೆ ಹಾಗು ಪರೀಕ್ಷೆಯನ್ನು ಡಾ. ಪ್ರಜ್ವಲ್ (ಎಲುಬು ಮತ್ತು ಮೂಳೆ ತಜ್ಞರು, ಕೆ.ಎ೦. ಸಿ. ಆಸ್ಪತ್ರೆ ಅತ್ತಾವರ) ಇವರಿ೦ದ ನಡೆಸಲಾಯಿತು.
ಶಿಬಿರದಲ್ಲಿ 65ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊ೦ಡು, ಬೆನ್ನುಮೂಳೆ ತಪಾಸಣೆ ಮತ್ತು ಮೂಳೆ ತಪಾಸಣೆಯನ್ನು, 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉಚಿತ BMD (Bone Mineral Density test) ಮತ್ತು ಮೂಳೆ ಮತ್ತು ಕೀಲು ಸಂಬಂಧಿತ ಸಮಸ್ಯೆಗಳಿಗೆ ಸಲಹೆಗಳನ್ನು ಪಡೆದು ಶಿಬಿರದ ಸದುಪಯೋಗಪಡೆದುಕೊ೦ಡರು.
ಈ ಶಿಬಿರದ ಸಮಪಾಲುದಾರರಾಗಿ JCI ಬಣಕಲ್ ವಿಸ್ಮಯ ಸ೦ಸ್ಥೆಯ ಹಾಲಿ ಅದ್ಯಕ್ಷರಾದ ಶ್ರೀ ಸುರೇ೦ದ್ರ, ಮಾಜಿ ಅದ್ಯಕ್ಷರಾದ ಶ್ರೀ ದಿನೇಶ್ ಎನ್. ಟಿ., ಶ್ರೀ ಮದನ್, ಶ್ರೀ ಗಜೇ೦ದ್ರ, ಮತ್ತು JCI ಬಣಕಲ್ ವಿಸ್ಮಯ ಇದರ ಪದಾದಿಕರಿಗಳು ಮತ್ತು ಸದಸ್ಯರುಗಳು, ಹಾಗು ಶಿಬಿರಿದ ಸಹ ಪ್ರಾಯೊಜಕಾರಾಗಿ ಗ್ರಾಮ ಪ೦ಚಾಯತ್ ಬಣಕಲ್ ಇದರ ಅದ್ಯಕ್ಷರಾದ ಶ್ರೀಮತಿ ಜ಼ರೀನ ಮತ್ತು ಗ್ರಾಮ ಪ೦ಚಾಯತ್ ಬಣಕಲ್ ಇದರ ಸದಸ್ಯರು ಮತ್ತು ಸಿಬ್ಬ೦ದಿ ವರ್ಗದವರು ಹಾಜರಿದ್ದು ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಸ೦ಧರ್ಭದಲ್ಲಿ ಅತ್ತಾವರ ಆಸ್ಪತ್ರೆ ಸಿಬ್ಬ೦ದಿಗಳಾದ ಶ್ರೀ ಉದಯ್ ಭಟ್ (ಸೀನಿಯರ್ ಮಾರ್ಕೆಟಿ೦ಗ್ ಎಗ್ಸಿಕ್ಯೂಟೀವ್ ಕೆ.ಎ೦. ಸಿ. ಆಸ್ಪತ್ರೆ ಅತ್ತಾವರ) ಶ್ರೀ ಪ್ರಜ್ವಲ್ (ಅಸೋಸಿಯೇಟ್ ಕೆ.ಎ೦. ಸಿ. ಆಸ್ಪತ್ರೆ ಅತ್ತಾವರ) ಶ್ರೀ ಗಣೇಶ್ ಭಟ್ (ಮಾರ್ಕೆಟಿ೦ಗ್ ಇನ್ ಚಾರ್ಜ್ ಕೆ.ಎ೦. ಸಿ. ಆಸ್ಪತ್ರೆ ಅತ್ತಾವರ) ಹೊಯ್ಸಳ ಹೆಲ್ತ್ ಕೇರ್ ಇದರ ವೈದ್ಯರಾದ ಶ್ರೀ ಶಶಿಕುಮಾರ್, ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇದರ ಆಡಳಿತ ಸಲಹೆಗಾರರಾದ ಶ್ರೀಮತಿ ಭವ್ಯ ನವೀನ್ ತಳವಾರ, ಮ್ಯಾನೇಜರ್ ಶ್ರೀ ಅನ೦ತ ಪ್ರಸಾದ್, ಸ್ಥಾನಿಕ ವೈದ್ಯರಾದ ಡಾ. ಚೈತನ್ಯ ನಾಯಕ್, ಡಾ. ಪ್ರತಿಭಾ, ಡಾ. ಶೀ ಲಕ್ಶ್ಮಿ. ಮತ್ತು ಎಲ್ಲಾ ಸಿಬ್ಬ೦ದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸರ್ವ ಸಹಕಾರವಿತ್ತರು.