ಬಣಕಲ್ ನಜರತ್ ಶಾಲೆ ಗೆ 100% ಫಲಿತಾಂಶ

ಬಣಕಲ್ : 2024-25ನೇ ಸಾಲಿನ ಐ. ಸಿ. ಎಸ್. ಇ ಹತ್ತನೇ ತರಗತಿ ಮತ್ತು ಐ. ಎಸ್. ಸಿ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು ನಜರೆತ್ ಶಾಲೆ 100% ಫಲಿತಾಂಶ ಪಡೆದುಕ್ಕೊಂಡಿದೆ.

ಶಾಲೆಯ 10ನೇ ತರಗತಿ ಸತತ 13ನೇ ವರ್ಷ ಹಾಗೂ 12ನೇ ತರಗತಿ ಪ್ರಥಮ ಬ್ಯಾಚ್ ಶೇಕಡಾ 100 ಫಲಿತಾಂಶ ಇದರಲ್ಲಿ 10ನೇ ತರಗತಿಯ 39 ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯ ಇಬ್ಬರು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಹತ್ತನೇ ತರಗತಿಯ 24 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯ ಓರ್ವ ವಿದ್ಯಾರ್ಥಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಮರ್ಕಲ್ ನ ವಿ. ಚರಣ್ ಕಾರಂತ್ ಮತ್ತು ಬಿ. ಕೆ. ಭವ್ಯಾಯವರ ಮಗ ಸಚಿನ್. ಜಿ. ಸಿ ಶೇಕಡಾ 96.20 ಅಂಕ ಗಳಿಸಿ ಶಾಲೆಗೆ ಪ್ರಥಮ, ಮಲೇಮನೆ ಗ್ರಾಮದ ರಾಜು. ಎಂ. ಎಂ ಮತ್ತು ಹೆಚ್. ಸಿ ವಿಂದ್ಯಾಯವರ ಪುತ್ರ ವಿಹಾನ್. ಆರ್. ಗೌಡ ಶೇ. 92 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಹಾಗೂ ಬಣಕಲ್ ಠಾಣೆಯ ಮುಖ್ಯ ಪೇದೆ ಹೆಚ್. ಎಸ್. ನಂದೀಶ್ ಮತ್ತು ಶಿಕ್ಷಕಿ ಗಂಗಮ್ಮರವರ ಮಗ ಸಮೃಧ್. ಹೆಚ್. ಎನ್. ಶೇ. 91.40 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡ ಲೋಬೋ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ ಬಣಕಲ್ ನ್ಯೂಸ್