ವಿದ್ಯುತ್ ತಂತಿ ಸ್ಪರ್ಶ ಲಾರಿ ಕ್ಲೀನರ್ ದುರ್ಮರಣ

ಚಿಕ್ಕಮಗಳೂರು: ಕಳಸ ತಾಲ್ಲೂಕು ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಉದ್ದನೆಯ 10 ಚಕ್ರದ ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಕ್ಲೀನರ್ 35 ವರ್ಷದ ರಫೀಕ್ ಮೃತ ಪಟ್ಟಿದ್ದಾರೆ.ಇವರು ಮೂಲತಃ ತರೀಕೆರೆ ನಿವಾಸಿ. ಸ್ಥಳಕ್ಕೆ ಕಳಸ ಪಿಎಸ್ಐ ಹರ್ಷವರ್ಧನ್ ಹಾಗೂ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರಾದ ಶರೀಫ್ ತುರ್ತಾಗಿ ತೆರಳಿ ಶವ ಕಳಸ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ

ಕಳಸ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ಮಾಡಿದರು.

ಕಳಸ ಆಸ್ಪತ್ರೆಗೆ ಶವ ರವಾನೆ

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ