ಮಕ್ಕಳಿಗೆ ಕಾನೂನು ಅರಿವು ಅತ್ಯಗತ್ಯ:ಬಾಳೂರು ಠಾಣಾ ಪಿ ಎಸ್ ಐ ದಿಲೀಪ್ ಕುಮಾರ್

ನಜರೆತ್ ಶಾಲೆ ಬಣಕಲ್ ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಸೈಬರ್ ಅಪರಾಧ ಮತ್ತು ಮಾಧಕ ವಸ್ತುಗಳ ದುಶ್ಚಟದ ಪರಿಣಾಮಗಳ ಕುರಿತ ಕಾನೂನು ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬಾಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ದಿಲೀಪ್ ಕುಮಾರ್ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು. ದೇಶದ ನಾಳಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರು ಸಿಸ್ಟರ್ ಹಿಲ್ಡ ಲೋಬೋ, ಶಾಲಾ ಸಿಬ್ಬಂದಿ ಲವಕುಮಾರ್, ಶಿಕ್ಷಕರು ಮತ್ತು ಪ್ರೌಢಶಾಲಾ ಮಕ್ಕಳು ಉಪಸ್ಥಿತರಿದ್ದರು.

ವರದಿ :✍️ಸೂರಿ ಬಣಕಲ್